alex Certify BIG NEWS : ‘SATS’ ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಬಗ್ಗೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘SATS’ ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಬಗ್ಗೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ

ಬೆಂಗಳೂರು : SATS ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಮಾಡುವ ಕುರಿತು  ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು.  ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2024 ಕ್ಕೆ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ದಿನಾಂಕ: 10.02.2024 ರಿಂದ ಅಭ್ಯರ್ಥಿಗಳು ಕೆಸಿಇಟಿ ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸೃಷ್ಟಿಕರಣ ನೀಡಿರುತ್ತಾರೆ.

ವಿದ್ಯಾರ್ಥಿಯ 10 ನೇ ತರಗತಿ ಉತ್ತೀರ್ಣರಾಗಿದ್ದು, ಸ್ಮಾಟ್ಸ್ ತಂತ್ರಾಂಶದಲ್ಲಿ ಹೆಸರು ಹಾಗೂ ವರ್ಷವಾರು ತರಗತಿ ತಪ್ಪಾಗಿದ್ದರೆ ತಿನ್ನುವಡಿಗೆ ವಿದ್ಯಾರ್ಥಿಯು ಮನವಿ ಸಲ್ಲಿಸಿದ್ದಲ್ಲಿ ವಿದ್ಯಾರ್ಥಿಯ ಹೆಸರಿನ ತಿದ್ದುಪಡಿಗೆ 10ನೇ ತರಗತಿಯ ಅಂಕಪಟ್ಟಿ ಹಾಗೂ ಶಾಲಾ ದಾಖಲಾತಿ ರಿಜಿಸ್ಟರ್ ನಲ್ಲಿ ಇರುವಂತೆ ಹಾಗೂ ಒಂದೇ ಶಾಲೆಯಲ್ಲಿ ವರ್ಷವಾರು ತರಗತಿ ತಿದ್ದುಪಡಿಗೆ Study Certificate ನಲ್ಲಿ ಇರುವಂತೆ ಸ್ಯಾಟ್ಸ್ ತಂತ್ರಾಂಶದಲ್ಲಿ ತಿದ್ದುಪಡಿ ಮಾಡಲು ಜಿಲ್ಲಾ, ಉಪನಿರ್ದೇಶಕರು(ಆಡಳಿತ) ರವರ ಹಂತದಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಯ ಹೆಸರು ತಿದ್ದುಪಡಿಗೆ ಬರುವ ಅರ್ಜಿಗಳನ್ನು 10ನೇ ತರಗತಿಯ ಅಂಕಪಟ್ಟಿ ಹಾಗೂ ಶಾಲಾ ದಾಖಲಾತಿ ರಿಜಿಸ್ಟರ್ನೊಂದಿಗೆ ಪರಿಶೀಲಿಸಿ ಹಾಗೂ ಒಂದೇ ಶಾಲೆಯಲ್ಲಿ ವರ್ಷವಾರು ತರಗತಿಗಳ ತಿದ್ದುಪಡಿಗೆ ಬರುವ ಅರ್ಜಿಗಳನ್ನು Study Certificate ನೊಂದಿಗೆ ಪರಿಶೀಲಿಸಿ ದಾಖಲೆಗಳನ್ನು ದೃಢೀಕರಿಸಿಕೊಂಡು ಹೆಸರು ಹಾಗೂ ಒಂದೇ ಶಾಲೆಯಲ್ಲಿ ವರ್ಷವಾರು ತರಗತಿಗಳ ತಿದ್ದುಪಡಿ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...