ಬಿಜೆಪಿಗೆ ಮೊದಲ ಜಯ ಸಿಕ್ಕಿದೆ. ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 15 ರಲ್ಲಿ 40 ಮತಗಳ ಅಂತರದಲ್ಲಿ ಪಕ್ಷೇತರ ಅಭ್ಯರ್ಥಿಯ ವಿರುದ್ಧ ಬಿಜೆಪಿ ಅಭ್ಯರ್ಥಿ ನೇತ್ರಾವತಿ ಜಯಗಳಿಸಿದ್ದಾರೆ. ನೇತ್ರಾವತಿ ಅವರಿಗೆ 1285 ಮತಗಳು ಬಂದಿವೆ. ಪಕ್ಷೇತರ ಅಭ್ಯರ್ಥಿಗೆ 1240 ಮತಗಳು ಬಂದಿವೆ.
ಬೆಳಗಾವಿ ವಾರ್ಡ್ ನಂಬರ್ ಮೂರರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಕಡೋಲಕರ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ. 14 ರಲ್ಲಿ ಎಂಇಎಸ್ ಅಭ್ಯರ್ಥಿ ಜಯಗಳಿಸಿದ್ದಾರೆ.