alex Certify BIG NEWS: ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ; ನದಿ, ಕೆರೆ ನೀರಲ್ಲೂ ಕೊರೋನಾ ವೈರಸ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ; ನದಿ, ಕೆರೆ ನೀರಲ್ಲೂ ಕೊರೋನಾ ವೈರಸ್ ಪತ್ತೆ

ನವದೆಹಲಿ: ನದಿಗಳ ನೀರಿನ ಸ್ಯಾಂಪಲ್ ನಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದೆ. ಸಬರಮತಿ, ಕನಕಾರಿಯಾ ನದಿಯ ನೀರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ಚಾಂದೋಲ ಕೆರೆಯ ನೀರಿನ ಸ್ಯಾಂಪಲ್ ನಲ್ಲಿಯೂ ಕೊರತೆಯಾಗಿದೆ. ಗುಜರಾತ್ ನ ಅಹಮದಾಬಾದ್ ಸಬರಮತಿ, ಅಸ್ಸಾಂನ ಭರೂ ನದಿ ನೀರಿನ ಸ್ಯಾಂಪಲ್ ನಲ್ಲಿಯೂ ಕೊರೋನಾ ಸೋಂಕು ಇರುವುದು ಜೆ.ಎನ್.ಯು. ಪರಿಸರ ವಿಜ್ಞಾನ ವಿದ್ಯಾರ್ಥಿಗಳ ಸಂಶೋಧನೆಯಲ್ಲಿ ಗೊತ್ತಾಗಿದೆ.

ಅಹಮದಾಬಾದ್‌ನ ಸಬರಮತಿ ನದಿ, ಕನಕಾರಿಯಾ ಮತ್ತು ಚಾಂದೋಲಾ ಸರೋವರಗಳಿಂದ ತೆಗೆದ ಮಾದರಿಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಐಐಟಿ, ಗಾಂಧಿನಗರ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಶಾಲೆಯ ಸಂಶೋಧಕರು ಸಬರಮತಿ ನದಿ ಮತ್ತು ಚಂದೋಲಾ, ಕಾಂಕ್ರಿಯಾ ಸರೋವರಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಸರೋವರಗಳು ಮತ್ತು ನದಿಗಳಲ್ಲಿ SARS-CoV-2 ಇರುವುದು ಅಪಾಯಕಾರಿ ಸ್ಥಿತಿಗೆ ಕಾರಣವಾಗಬಹುದು ಎಂದು ಗಾಂಧಿನಗರದ ಐಐಟಿಯ ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮನೀಶ್ ಕುಮಾರ್ ಹೇಳಿದರು.

ಸೆಪ್ಟೆಂಬರ್ 3 ಮತ್ತು ಡಿಸೆಂಬರ್ 29, 2019 ರ ನಡುವೆ ವಾರಕ್ಕೊಮ್ಮೆ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಸಬರಮತಿ ನದಿಯಿಂದ 694 ಮಾದರಿಗಳನ್ನು ಸಂಗ್ರಹಿಸಿದರೆ, ಚಾಂದೋಲಾ ಸರೋವರದಿಂದ 549 ಮತ್ತು ಕನಕಾರಿಯಾ ಸರೋವರದಿಂದ 402 ಮಾದರಿ ತೆಗೆದುಕೊಳ್ಳಲಾಗಿದೆ. ವೈರಸ್ ನೈಸರ್ಗಿಕ ನೀರಿನಲ್ಲಿ ಹೆಚ್ಚು ಕಾಲ ಬದುಕಬಲ್ಲದು. ದೇಶಾದ್ಯಂತ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಬೇಕೆಂದು ಸಂಶೋಧಕರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...