ಕೊರೊನಾ ಎರಡನೇ ಅಲೆ ಕಡಿಮೆಯಾಗುವ ಮುನ್ನವೇ ಮೂರನೇ ಅಲೆ ಭಯ ಶುರುವಾಗಿದೆ. ಅಗಸ್ಟ್ ನಲ್ಲಿ ಕೊರೊನಾ ಮೂರನೇ ಅಲೆ ಭಾರತಕ್ಕೆ ಬರಲಿದೆ. ಅಕ್ಟೋಬರ್ ನಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೇರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಬ್ಲೂಮ್ಬರ್ಗ್ನ ವರದಿಯ ಪ್ರಕಾರ, ಹೈದರಾಬಾದ್ ಮತ್ತು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಬಗ್ಗೆ ಸಂಶೋಧನೆ ನಡೆಸಿದೆ. ಸಂಶೋಧನೆ ಅಧ್ಯಯನದ ಪ್ರಕಾರ, ಕೊರೊನಾ ವೈರಸ್ ಮೂರನೇ ಅಲೆ, ದಿನಕ್ಕೆ 1,00,000 ಸೋಂಕುಗಳೊಂದಿಗೆ ಉತ್ತುಂಗಕ್ಕೇರಬಹುದು ಎನ್ನಲಾಗಿದೆ.
ಸಂಶೋಧಕರು ನೆಮ್ಮದಿ ಸುದ್ದಿಯೊಂದನ್ನು ನೀಡಿದ್ದಾರೆ. ಮೂರನೇ ಅಲೆ, ಎರಡನೇ ಅಲೆಯಷ್ಟು ಕ್ರೂರವಾಗುವ ಸಾಧ್ಯತೆಯಿಲ್ಲ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಏಕಾಏಕಿ ಉತ್ತುಂಗಕ್ಕೇರಬಹುದು ಎಂದು ಮೇ ತಿಂಗಳಲ್ಲಿ ಹೈದರಾಬಾದ್ ಮತ್ತು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಥುಕುಮಳ್ಳಿ ವಿದ್ಯಾಸಾಗರ್ ಹೇಳಿದ್ದರು.
ಈಗ ಮತ್ತೆ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಪ್ರಸ್ತುತ ವಾರದಲ್ಲಿ, ಭಾರತದಲ್ಲಿ 2.86 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಾಗಿವೆ. ಜುಲೈ 26ರಿಂದ ಆಗಸ್ಟ್ ಒಂದರವರೆಗೆ ಪ್ರಕರಣ ಹೆಚ್ಚಾಗಿದೆ. ಸೋಮವಾರ,ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ 40,134 ಹೊಸ ಕೋವಿಡ್ -19 ಸೋಂಕು ದಾಖಲಾಗಿದೆ. ಸತತ ಆರನೇ ದಿನ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗಿದೆ.