ಕೋವಿಡ್ ಸಾಂಕ್ರಮಿಕದ ಈ ಕಾಲಘಟ್ಟದಲ್ಲಿ ನೀವು ಎಲ್ಲಿಯಾದರೂ, ಯಾರಿಂದಲಾದರೂ ವೈರಾಣುವಿಗೆ ಸೋಂಕಿತರಾಗಬಹುದಾಗಿದೆ. ಆದರೆ ಕೆಲವೊಂದು ಜಾಗಗಳು ಈ ವಿಚಾರದಲ್ಲಿ ತುಸು ಹೆಚ್ಚೇ ರಿಸ್ಕಿ ಎಂಬಂತಿವೆ.
ಸೂಪರ್ ಮಾರ್ಕೆಟ್‌ಗಳು ಹಾಗೂ ದಿನಸಿ ಅಂಗಡಿಗಳು ಕೋವಿಡ್ ಹಬ್ಬುವ ಸಾಧ್ಯತೆ ಅತ್ಯಂತ ಹೆಚ್ಚಿರುವ ಜಾಗಗಳಾಗಿವೆ ಎಂದು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಕೋವಿಡ್ ರೋಗಲಕ್ಷಣಗಳು ತಮ್ಮ ದೇಹದಲ್ಲಿ ಕಂಡುಬರುವ ಮುಂಚೆ ಬಹುತೇಕ ಮಂದಿ ಸೂಪರ್ ಮಾರ್ಕೆಟ್ ಅಥವಾ ದಿನಸಿ ಅಂಗಡಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಕೋವಿಡ್ ಪೀಡಿತರು ಯಾವೆಲ್ಲಾ ಜಾಗಕ್ಕೆ ಭೇಟಿ ಕೊಟ್ಟಿದ್ದರು ಎಂದು ಟೆಸ್ಟ್ ಅಂಡ್ ಟ್ರೇಸ್ ಅಪ್ಲಿಕೇಶನ್ ಬಳಸಿಕೊಂಡು ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಎನ್‌ಎಚ್‌ಎಸ್ ಮಾಹಿತಿ ಕಲೆ ಹಾಕಿವೆ.
ಈ ಸೂಪರ್ ಮಾರ್ಕೆಟ್‌ಗಳಲ್ಲಿ ಸೋಂಕಿತರು ಮುಟ್ಟಿ ಹೋಗಿರುವ ವಸ್ತುಗಳನ್ನು ನೀವು ಮುಟ್ಟಬಹುದಾದ ಸಾಧ್ಯತೆ ಇರುವ ಕಾರಣ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.
ಅದೆಷ್ಟೇ ನಿರ್ಬಂಧಗಳನ್ನು ಹೇರಿದ್ದರೂ ಸಹ ಸ್ಟೋರ್‌ಗಳಲ್ಲಿ ಜನಜಂಗುಳಿಯನ್ನು ಯಾವಾಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಭಾಯಿಸುವುದು ಬಲು ಕಷ್ಟವಾದ ಕಾರಣ ಸೋಂಕು ಹಬ್ಬುವ ಸಾಧ್ಯತೆ ಯಾವಾಗಲೂ ಹೆಚ್ಚೇ ಇರುತ್ತದೆ.
ಸೋಂಕು ಹರಡುವ ಸಾಧ್ಯತೆಯ 18.6%ರಷ್ಟನ್ನು ಹೊಂದಿರುವ ಸೂಪರ್ ಮಾರ್ಕೆಟ್‌ಗಳು, ಈ ವಿಚಾರದಲ್ಲಿ ಶಾಲೆಗಳು, ನರ್ಸಿಂಗ್ ಹೋಂಗಳು, ಹೊಟೇಲ್‌ಗಳು, ರೆಸ್ಟೋರಂಟ್‌ಗಳು ಹಾಗೂ ಸಾರ್ವಜನಿಕ ವಾಶ್‌ರೂಂಗಳನ್ನು ಹಿಂದಿಕ್ಕಿವೆ.
ರೆಸ್ಟೋರಂಟ್‌ಗಳು, ಕೆಫೆಗಳು, ಜಿಮ್‌ಗಳಲ್ಲೂ ಸಹ ಕೋವಿಡ್ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಬಹಳಷ್ಟು ಇವೆ ಎಂದು ಬ್ರಿಟನ್ ಮೂಲದ ಈ ಸಮೀಕ್ಷೆ ತಿಳಿಸಿದೆ.