ಕೊರೊನಾ ಇಡೀ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ವೈರಸ್ ಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಮಧ್ಯೆ ಬ್ರಿಟನ್ ಮಹಿಳೆಯೊಬ್ಬಳು ಕೊರೊನಾದಿಂದ ತನ್ನ ಜೀವ ಉಳಿದಿದೆ ಎನ್ನುವ ಮೂಲಕ, ಅಚ್ಚರಿ ಮೂಡಿಸಿದ್ದಾಳೆ.
ಬ್ರಿಟನ್ ಮಹಿಳೆ ಹೆಸರು ಗೆಮ್ಮಾ ಫಲೂನ್. ಆಕೆಗೆ 41 ವರ್ಷ. ಯುಕೆ ಎಲ್ಲೆಸ್ಮೆರ್ ಬಂದರಿನ ನಿವಾಸಿ. ಆಕೆಗೆ ನಿರಂತರವಾಗಿ ಗಂಟಲು ನೋವು ಕಾಣಿಸಿಕೊಳ್ಳುತ್ತಿತ್ತಂತೆ. ಈ ಬಗ್ಗೆ ಗೆಮ್ಮಾ ತಲೆ ಕೆಡಿಸಿಕೊಂಡಿರಲಿಲ್ಲವಂತೆ. ಗಂಟಲು ನೋವಿನ ಜೊತೆ, ಬೆನ್ನು ನೋವು ಮತ್ತು ಮೂತ್ರದಲ್ಲಿ ರಕ್ತ ಬರಲಾರಂಭಿಸಿತ್ತಂತೆ. ಕೊರೊನಾದಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಭಾವಿಸಿದ್ದ ಗೆಮ್ಮಾ, ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾದಳಂತೆ.
BIG NEWS: ಒಂದೇ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು; ಇಡೀ ಕಾಲೇಜು ಸೀಲ್ ಡೌನ್
ಕೊರೊನಾ ಪರೀಕ್ಷೆಗೆ ಹೋದಾಗ, ಗೆಮ್ಮಾಗೆ ಆಘಾತ ಕಾದಿತ್ತಂತೆ. ಪರೀಕ್ಷಾ ವರದಿಯಲ್ಲಿ, ಥೈರಾಯ್ಡ್ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತಂತೆ. ಮೂರು ಮಕ್ಕಳ ತಾಯಿ ಗೆಮ್ಮಾ, ಕೊರೊನಾ ಪರೀಕ್ಷೆ ಮಾಡದೆ ಹೋಗಿದ್ದರೆ ಸಾವಿಗೆ ಹತ್ತಿರವಾಗಿರುತ್ತಿದ್ದೆ ಎಂದಿದ್ದಾಳೆ.
ಕೊರೊನಾದಿಂದಾಗಿ ನಾನು ಪರೀಕ್ಷೆ ಮಾಡಿಸಲು ಮುಂದಾದೆ. ಇದ್ರಿಂದ ನನ್ನ ರೋಗ ತಿಳಿಯಿತು. ಸರಿಯಾದ ಚಿಕಿತ್ಸೆ ಪಡೆದ ಕಾರಣ ಈಗ ಆರೋಗ್ಯ ಸುಧಾರಿಸುತ್ತಿದೆ ಎಂದು ಗೆಮ್ಮಾ ಹೇಳಿದ್ದಾಳೆ. ಗೆಮ್ಮಾಗೆ ಮೂರು ಬಾರಿ ಶಸ್ತ್ರಚಿಕಿತ್ಸೆಯಾಗಿದೆ. ಕ್ಯಾನ್ಸರ್ ಗಡ್ಡೆಯನ್ನು ತೆಗೆಯಲಾಗಿದೆ ಎಂದು ಗೆಮ್ಮಾ ಹೇಳಿದ್ದಾಳೆ.