ಓಮಿಕ್ರೋನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಮೊದಲ ಹಾಗೂ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ.
ಮಕ್ಕಳಲ್ಲಿ ಕೊರೊನಾ ಲಕ್ಷಣ ಸೌಮ್ಯವಾಗಿರುತ್ತದೆ. ಕೆಲ ಮಕ್ಕಳಲ್ಲಿ ರೋಗ ಲಕ್ಷಣ ಕಾಣಿಸುವುದಿಲ್ಲವೆಂದು ತಜ್ಞರು ಹೇಳಿದ್ದಾರೆ. ಆದ್ರೆ ಕೆಲ ಮಕ್ಕಳಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ.
ಮಕ್ಕಳಲ್ಲೂ ಕೊರೊನಾದ ವಿಭಿನ್ನ ಲಕ್ಷಣಗಳು ಕಂಡುಬರುತ್ತವೆ. ಜ್ವರ, ಆಯಾಸ, ಕೆಮ್ಮು, ರುಚಿ ಮತ್ತು ವಾಸನೆಯ ನಷ್ಟ ಮಕ್ಕಳಲ್ಲಿಯೂ ಸಾಮಾನ್ಯವಾಗಿ ಕಾಣಿಸಿಕೊಳ್ತಿರುವ ರೋಗ ಲಕ್ಷಣ. ಇದರ ಹೊರತಾಗಿ ಮಕ್ಕಳಲ್ಲಿ ಉರಿಯೂತದ ಸಮಸ್ಯೆ ಕಾಣಿಸಿಕೊಳ್ತಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಲಕ್ಷಣ ಹೆಚ್ಚಾಗಿ ಕಂಡು ಬರ್ತಿದೆ.
ವೈದ್ಯರ ಪ್ರಕಾರ, ಈ ಸಮಸ್ಯೆಯನ್ನು ಹೊಂದಿರುವ ಮಕ್ಕಳು ಹೃದಯ, ಶ್ವಾಸಕೋಶಗಳು, ರಕ್ತನಾಳಗಳು, ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ, ಮೆದುಳು, ಚರ್ಮ ಅಥವಾ ಕಣ್ಣುಗಳಂತಹ ಅನೇಕ ಅಂಗಗಳಲ್ಲಿ ತೀವ್ರವಾದ ಉರಿಯೂತ ಕಾಣಿಸಿಕೊಳ್ತಿದೆ. ಓಮಿಕ್ರೋನ್ ನಿಂದ ಪ್ರಭಾವಿತವಾಗಿರುವ ಮಕ್ಕಳಲ್ಲಿ ಕ್ರೂಫ್ ಹೆಸರಿನ ರೋಗ ಕಾಣಿಸಿಕೊಳ್ತಿದೆ. ಇದು ನಾಯಿ ಕೆಮ್ಮಿಗೆ ಕಾರಣವಾಗ್ತಿದೆ.