ಜೆರುಸಲೇಂ: ಇಸ್ರೇಲ್ ಬಹುತೇಕ ಕೊರೋನಾ ಯುದ್ಧವನ್ನು ಜಯಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ರದ್ದು ಮಾಡಿದೆ. ಶಾಲೆಗಳನ್ನು ಪ್ರಾರಂಭಿಸಲಾಗಿದೆ.
ಇಸ್ರೇಲ್ ನಲ್ಲಿ ವ್ಯಾಪಕವಾಗಿ ಕೊರೋನಾ ಲಸಿಕೆ ನೀಡಿಕೆ ಕಾರ್ಯಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ರದ್ದು ಮಾಡಿದ್ದು, ಶಾಲೆಗಳನ್ನು ಆರಂಭಿಸಲಾಗಿದೆ.
ಶೇಕಡ 81 ರಷ್ಟು ಜನರಿಗೆ ಲಸಿಕೆ ವಿತರಣೆ ಬೆನ್ನೆಲ್ಲೆ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಒಳಾಂಗಣ ಮತ್ತು ಹೆಚ್ಚಿನ ಜನ ಸೇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕಿದೆ. ಉಳಿದಂತೆ ಅನೇಕ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ಲಸಿಕೆ ವಿತರಣೆಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಕೈಗೊಂಡ ಇಸ್ರೇಲ್ ಶೇಕಡ 81 ರಷ್ಟು ಜನರಿಗೆ ಲಸಿಕೆ ನೀಡಿದೆ. ಲಸಿಕೆಯ ಬಗ್ಗೆ ಅನುಮಾನ ನಿವಾರಿಸುವ ಉದ್ದೇಶದಿಂದ ಮೊದಲು ಗಣ್ಯರು ಲಸಿಕೆ ಸ್ವೀಕರಿಸಿದ್ದಾರೆ. ಮೊದಲಿಗೆ 60 ವರ್ಷ ಮೇಲ್ಪಟ್ಟ ಆದ್ಯತೆ ವರ್ಗಕ್ಕೆ, ನಂತರ 60 ವರ್ಷ ಕೆಳಗಿನವರಿಗೆ ನಂತರದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು. 93 ಲಕ್ಷ ಜನಸಂಖ್ಯೆ ಇರುವ ಇಸ್ರೇಲಿನಲ್ಲಿ ಈಗ 2540 ಸಕ್ರಿಯ ಪ್ರಕರಣಗಳು ಇವೆ. ಇಸ್ರೇಲ್ ಜನರಲ್ಲಿ ಹರ್ಡ್ ಇಮ್ಯುನಿಟಿ ಬಂದಿದ್ದು, ಮುಂದಿನ ದಿನಗಳಲ್ಲಿ ವಿದೇಶಿಯರಿಗೂ ಇಸ್ರೇಲ್ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.