ಉತ್ತರ ಪ್ರದೇಶದ ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಪ್ಯಾರಾಮೆಡಿಕ್ಸ್ ಸೇರಿದಂತೆ 25 ವೈದ್ಯಕೀಯ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಮಂಗಳವಾರ ಈ ಫಲಿತಾಂಶ ಹೊರಬಿದ್ದಿದ್ದು, ಪಾಸಿಟಿವ್ ಆಗಿರುವ 25 ಜನರನ್ನ ಪ್ರತ್ಯೇಕಿಸಲಾಗಿದೆ.
ಶನಿವಾರದಂದು ರಾಜ್ಯ ಸರ್ಕಾರವು ಮೇದಾಂತ ಆಸ್ಪತ್ರೆಯ ಉದ್ಯೋಗಿಗಳಿಗೆ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಆದೇಶಿಸಿದೆ, ಅದರ ನಂತರವೆ ಈ 25 ಪ್ರಕರಣಗಳು ವರದಿಯಾಗಿವೆ.
ಇಡೀ ಆಸ್ಪತ್ರೆಯ ಸಿಬ್ಬಂದಿಗಳ ಸ್ಯಾಂಪಲ್ ಗಳನ್ನು ಪರೀಕ್ಷಿಸಿದಾಗ ಈ 25ಜನರು ಕೊರೋನಾಗೆ ತುತ್ತಾಗಿರುವುದು ಬಯಲಾಗಿದೆ. ಒಟ್ಟು 800 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 25 ಉದ್ಯೋಗಿಗಳಲ್ಲಿ ಸೋಂಕು ದೃಢವಾಗಿದೆ ಎಂದು ಮೇದಾಂತ ಆಸ್ಪತ್ರೆಯ ನಿರ್ದೇಶಕ ಡಾ ರಾಕೇಶ್ ಕಪೂರ್ ಹೇಳಿದ್ದಾರೆ.
ಸಧ್ಯ 25 ಜನರು ಪ್ರತ್ಯೇಕವಾಗಿ ತಮ್ಮ ತಮ್ಮ ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದು ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಕಪೂರ್ ತಿಳಿಸಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶದಲ್ಲಿ ಒಟ್ಟು 2,261 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಸೋಮವಾರ 572 ಹೊಸ ಪ್ರಕರಣಗಳು ವರದಿಯಾಗಿವೆ.