ಬೆಂಗಳೂರು: ರಾಜ್ಯದಲ್ಲಿ ಇಂದು 1509 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,74,555 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇವತ್ತು 24 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 11,678 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 8,38,150 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 24,708 ಸಕ್ರಿಯ ಪ್ರಕರಣಗಳಿದ್ದು ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ನಗರದಲ್ಲಿ 725 ಜನರಿಗೆ ಸೋಂಕು ತಗುಲಿದೆ. ತುಮಕೂರು 89, ಮಂಡ್ಯ 58, ಕಲಬುರ್ಗಿ 56, ಕೋಲಾರ 35, ಬಳ್ಳಾರಿ 34, ಉತ್ತರಕನ್ನಡ 30, ದಕ್ಷಿಣಕನ್ನಡ 28, ಚಿಕ್ಕಮಗಳೂರು 21 ಸೇರಿದಂತೆ ರಾಜ್ಯದಲ್ಲಿ 1509 ಜನರಿಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ.