ರಾಜ್ಯದಲ್ಲಿ ಇಂದೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು ಕಳೆದ 24 ಗಂಟೆಗಳಲ್ಲಿ 2000ಕ್ಕಿಂತ ಕಡಿಮೆ ಕೇಸ್ಗಳು ದಾಖಲಾಗಿದೆ.
ರಾಜ್ಯದಲ್ಲಿ 1977 ಹೊಸ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2878564 ಆಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 48 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಇಲ್ಲಿವರೆಗೆ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 36037 ಆಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 3188 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 2810121 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದೆ. ಕೋವಿಡ್ 19 ಸೋಂಕಿನ ಶೇಕಡಾವಾರು ಪ್ರಮಾಣ 1.42 ಪ್ರತಿಶತವಾಗಿದ್ದರೆ ಕೊರೊನಾದಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ 2.42 ಆಗಿದೆ. ಕಳೆದ 24 ಗಂಟೆಗಳಲ್ಲಿ 138274 ಕೊರೊನಾ ಪರೀಕ್ಷೆ ಮಾಡಲಾಗಿದ್ದು ಒಟ್ಟು ಕೊರೊನಾ ಪರೀಕ್ಷೆಯ ಸಂಖ್ಯೆ 36431379 ಆಗಿದೆ.
ಬೆಂಗಳೂರು ನಗರದಲ್ಲಿಂದು 462 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1220960 ಆಗಿದೆ. ಒಂದೇ ದಿನದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 56, ಬಾಗಲಕೋಟೆ 4, ಬಳ್ಳಾರಿ 5, ಬೀದರ್2, ಚಾಮರಾಜನಗರ 31 , ಚಿಕ್ಕಬಳ್ಳಾಪುರ 27 , ಚಿಕ್ಕಮಗಳೂರು 109 , ಚಿತ್ರದುರ್ಗ 27, ದಕ್ಷಿಣ ಕನ್ನಡ 224 ,ದಾವಣಗೆರೆ 23 ,ಧಾರವಾಡ 12, ಗದಗ 2, ಹಾಸನ 158, ಹಾವೇರಿ 2, ಕಲಬುರಗಿ 8 , ಕೊಡಗು 73,ಕೋಲಾರ 36,ಕೊಪ್ಪಳ 3, ಮಂಡ್ಯ 51, ಮೈಸೂರು 197,ರಾಯಚೂರು 4, ರಾಮನಗರ 16, ಶಿವಮೊಗ್ಗ 71, ತುಮಕೂರು 86, ಉಡುಪಿ 110, ಉತ್ತರ ಕನ್ನಡ 71, ವಿಜಯಪುರ 11, ಯಾದಗಿರಿ 2 ಪ್ರಕರಣಗಳು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 10, ದಕ್ಷಿಣ ಕನ್ನಡದಲ್ಲಿ 7, ಮೈಸೂರಿನಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ 5ಕ್ಕಿಂತ ಕಡಿಮೆ ಕೋವಿಡ್ ಸಾವುಗಳು ವರದಿಯಾಗಿದೆ.