ನವದೆಹಲಿ: ಬ್ರಿಟನ್ ನಿಂದ ಭಾರತಕ್ಕೆ ವಾಪಸಾಗಿರುವ ಆರು ಜನರಲ್ಲಿ ಕೊರೊನಾ ಸೋಂಕು ತಗಲಿದ್ದು, ಇವರಲ್ಲಿ ಬೆಂಗಳೂರಿನ ಮೂವರು ಸೋಂಕಿತರಿದ್ದಾರೆ. ಈ ಮೂವರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೋನಾ ಸೋಂಕಿನ ರೀತಿಯಲ್ಲೇ ಬ್ರಿಟನ್ ರೂಪಾಂತರ ಸೋಂಕಿನ ಲಕ್ಷಣಗಳು ಇವೆ. ಆದರೆ, ಬ್ರಿಟನ್ ವೈರಸ್ ಅತಿವೇಗವಾಗಿ ಹರಡುತ್ತದೆ. ರೋಗದ ತೀವ್ರತೆ ಕಡಿಮೆ ಇರುತ್ತದೆ.
ಆರಂಭದಲ್ಲಿ ಕೆಮ್ಮು ನೆಗಡಿ ಜ್ವರ ಕಂಡುಬರುತ್ತದೆ.
ಭೇದಿ, ಅತಿಸಾರ ಶುರುವಾಗುತ್ತದೆ.
ರುಚಿ, ವಾಸನೆಯ ಅನುಭವ ಗೊತ್ತಾಗುವುದಿಲ್ಲ.
ಚರ್ಮದ ಮೇಲೆ ಗುಳ್ಳೆಗಳು ಅಥವಾ ದದ್ದು ಕಾಣಿಸಿಕೊಳ್ಳಬಹುದು.
ಸೋಂಕು ತಿವ್ರತೆ ಜಾಸ್ತಿಯಾಗಿ ಉಸಿರಾಟದ ಸಮಸ್ಯೆ ಕಾಣಿಸುತ್ತದೆ.
ರೋಗ ತಡೆಗೆ ಮುಂಜಾಗ್ರತೆ ವಹಿಸುವುದು ಮುಖ್ಯವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈತೊಳೆಯುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ.