ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1365 ಜನರಿಗೆ ಸೋಂಕು ತಗುಲಿದೆ. 1558 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 29,33,192 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,74,839 ಜನ ಗುಣಮುಖರಾಗಿದ್ದು, 37,061 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 22 ಸೋಂಕಿತರು ಮೃತಪಟ್ಟಿದ್ದಾರೆ. 21,266 ಸಕ್ರಿಯ ಪ್ರಕರಣಗಳು ಇವೆ. ಇಂದು 1,79,016 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.76 ರಷ್ಟು ಇದೆ.
ಬೆಂಗಳೂರಿನಲ್ಲಿ 327 ಜನರಿಗೆ ಸೋಂಕು ತಗುಲಿದ್ದು, 318 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. 7920 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿತರ ಮಾಹಿತಿ
ಬಾಗಲಕೋಟೆ 2, ಬಳ್ಳಾರಿ 2, ಬೀದರ್ 2, ಚಾಮರಾಜನಗರ 7, ಚಿಕ್ಕಬಳ್ಳಾಪುರ 4, ಗದಗ 1, ಹಾವೇರಿ 1, ಕೊಪ್ಪಳ 0, ರಾಯಚೂರು 5, ರಾಮನಗರ 0, ವಿಜಯಪುರ 1, ಯಾದಗಿರಿ 0 ಪ್ರಕರಣ ವರದಿಯಾಗಿವೆ.
ಉತ್ತರ ಕನ್ನಡ 51, ಉಡುಪಿ 97, ತುಮಕೂರು 52, ಶಿವಮೊಗ್ಗ 45, ಮೈಸೂರು 123, ಕೊಡಗು 86, ಹಾಸನ 107, ದಕ್ಷಿಣಕನ್ನಡ 268, ಚಿಕ್ಕಮಗಳೂರು 47, ಬೆಂಗಳೂರು ನಗರ 327 ಹೊಸ ಪ್ರಕರಣ ದಾಖಲಾಗಿದೆ.
ಮೃತರ ವಿವರ
ಬೆಂಗಳೂರು ಗ್ರಾಮಾಂತರ 2, ಬೆಳಗಾವಿ 2, ಬೆಂಗಳೂರು ನಗರ 2, ಚಾಮರಾಜನಗರ 1, ದಕ್ಷಿಣ ಕನ್ನಡ 3, ದಾವಣಗೆರೆ 1, ಕೋಲಾರ 1, ಮೈಸೂರು 3, ಶಿವಮೊಗ್ಗ 1, ತುಮಕೂರು 2, ಉಡುಪಿ 2, ಉತ್ತರಕನ್ನಡ 1, ಯಾದಗಿರಿ 1 ಸಾವಿನ ವರದಿಯಾಗಿದೆ.