ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 41,664 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇವತ್ತು ಒಂದೇ ದಿನ 349 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 21,434 ಸೋಂಕಿತರು ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 21,71,931 ಕ್ಕೆ ಏರಿಕೆಯಾಗಿದೆ. ಇಂದು 34,425 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 15,44,982 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,05,494 ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 94 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇವತ್ತು 13,402 ಜನರಿಗೆ ಸೋಂಕು ತಗಲಿದ್ದು, 3,66,791 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು, ಸಾವಿನ ಸಂಖ್ಯೆ ಭಾರೀ ಏರಿಕೆಯಾಗಿದೆ. ಬಳ್ಳಾರಿಯಲ್ಲಿ 28, ಬಾಗಲಕೋಟೆ 18, ಬೆಂಗಳೂರು ಗ್ರಾಮಾಂತರ 10, ಹಾಸನ 11, ಕಲಬುರ್ಗಿ 21, ಕೊಪ್ಪಳ 10, ಮಂಡ್ಯ 10,ಮೈಸೂರು 15, ಶಿವಮೊಗ್ಗ 15, ತುಮಕೂರು ಜಿಲ್ಲೆಯಲ್ಲಿ 18 ಮಂದಿ ಸೇರಿದಂತೆ ರಾಜ್ಯದಲ್ಲಿ ಇಂದು 349 ಮಂದಿ ಸಾವನ್ನಪ್ಪಿದ್ದಾರೆ.