alex Certify BREAKING: ಧಾರವಾಡದಲ್ಲಿ ಕೊರೋನಾ ಹೆಚ್ಚಳ, ಬೆಂಗಳೂರಲ್ಲಿ ಸಾವು ಶೂನ್ಯ; ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಧಾರವಾಡದಲ್ಲಿ ಕೊರೋನಾ ಹೆಚ್ಚಳ, ಬೆಂಗಳೂರಲ್ಲಿ ಸಾವು ಶೂನ್ಯ; ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 306 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. 224 ಜನ ಗುಣಮುಖರಾಗಿದ್ದಾರೆ.

ಪಾಸಿಟಿವಿಟಿ ದರ ಶೇಕಡಾ 0.36 ರಷ್ಟಿದೆ. ರಾಜ್ಯದಲ್ಲಿ 6492 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 38,187 ಸೋಂಕಿತರು ಸಾವನ್ನಪ್ಪಿದ್ದಾರೆ. 29,49,853 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,94,561 ಕ್ಕೆ ಏರಿಕೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 171 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನಲ್ಲಿ ಇಂದು 147 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5141 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ, ಬಳ್ಳಾರಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ. ಬೆಂಗಳೂರು ನಗರ 171, ದಕ್ಷಿಣಕನ್ನಡ 13, ಧಾರವಾಡ 42, ಮೈಸೂರು 20, ಉಡುಪಿ 13 ಹೊಸ ಪ್ರಕರಣ ವರದಿಯಾಗಿವೆ.

ಕೋಲಾರ 1, ಕಲಬುರ್ಗಿ 1 ಸೇರಿ ರಾಜ್ಯದಲ್ಲಿ ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...