ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1108 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 809 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 18 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,65,191 ಕ್ಕೆ ಏರಿಕೆಯಾಗಿದೆ. ಇದುವರೆಗೆ 29,11,434 ಜನ ಗುಣಮುಖರಾಗಿದ್ದಾರೆ. 37,555 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 16,174 ಸಕ್ರಿಯ ಪ್ರಕರಣಗಳಿವೆ. ಇವತ್ತು 1,66,006 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ಶೇಕಡ 0.66 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ 308 ಜನರಿಗೆ ಸೋಂಕು ತಗುಲಿದ್ದು, 203 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5 ಜನ ಸೋಂಕಿತರು ಮೃತಪಟ್ಟಿದ್ದಾರೆ. 7428 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿತರ ಮಾಹಿತಿ:
ಬಾಗಲಕೋಟೆ 1, ಬೀದರ್ 3, ಚಿಕ್ಕಬಳ್ಳಾಪುರ 4, ಗದಗ 3, ಹಾವೇರಿ 0, ಕೊಪ್ಪಳ 2, ರಾಯಚೂರು 0, ವಿಜಯಪುರ 3, ಯಾದಗಿರಿ 0, ಬೆಂಗಳೂರು ನಗರ 308, ಚಿಕ್ಕಮಗಳೂರು 63, ದಕ್ಷಿಣಕನ್ನಡ 186, ಹಾಸನ 64, ಮೈಸೂರು 87, ಶಿವಮೊಗ್ಗ 44, ಉಡುಪಿ 113, ಉತ್ತರಕನ್ನಡ 45 ಹೊಸ ಪ್ರಕರಣ ವರದಿಯಾಗಿವೆ.
ಮೃತಪಟ್ಟವರ ಸಂಖ್ಯೆ:
ಬೆಂಗಳೂರು ನಗರ 5, ಚಾಮರಾಜನಗರ 1, ಬೆಳಗಾವಿ 4, ದಕ್ಷಿಣಕನ್ನಡ 2, ದಾವಣಗೆರೆ 1, ಹಾಸನ 1, ಕೊಡಗು 1, ಕೋಲಾರ 1, ಮೈಸೂರು 1, ತುಮಕೂರು 1 ಸೇರಿದಂತೆ ರಾಜ್ಯದಲ್ಲಿ 18 ಸೋಂಕಿತರು ಮೃತಪಟ್ಟಿದ್ದಾರೆ.