
ಬೆಂಗಳೂರು: ರಾಜ್ಯದಲ್ಲಿ ಇಂದು ಕೋರೋನಾ ಮತ್ತಷ್ಟು ಇಳಿಮುಖವಾಗಿದ್ದು, 6151 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 49 ಜನ ಸೋಂಕಿತರು ಮೃತಪಟ್ಟಿದ್ದಾರೆ. 16,802 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 39,02,309 ಕ್ಕೆ ಏರಿಕೆಯಾಗಿದೆ. ಇದುವರೆಗೆ 39,396 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 37,75,799 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 87,080 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 6.19 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 2718 ಜನರಿಗೆ ಸೋಂಕು ತಗುಲಿದ್ದು, 15 ಜನ ಸೋಂಕಿತರು ಮೃತಪಟ್ಟಿದ್ದಾರೆ. 6726 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 35,631 ಸಕ್ರಿಯ ಪ್ರಕರಣಗಳು ಇವೆ.
ಬೆಳಗಾವಿ 321, ಹಾಸನ 219, ಮೈಸೂರು 285, ತುಮಕೂರು 210 ಹೊಸ ಪ್ರಕರಣ ವರದಿಯಾಗಿವೆ. ಬೆಂಗಳೂರು ನಗರ 15, ಬೆಳಗಾವಿ 2, ದಕ್ಷಿಣ ಕನ್ನಡ 3, ಹಾಸನ 2, ಮೈಸೂರು 6, ತುಮಕೂರು 4, ಉಡುಪಿ 4, ಉತ್ತರ ಕನ್ನಡ 2 ಸೇರಿ ರಾಜ್ಯದಲ್ಲಿ 49 ಸೋಂಕಿತರು ಮೃತಪಟ್ಟಿದ್ದಾರೆ.

