ಬೆಂಗಳೂರು: ರಾಜ್ಯದಲ್ಲಿ ಇಂದು 1705 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 30 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 2243 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
24,127 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿ ದರ ಶೇಕಡ 1.35 ರಷ್ಟು ಇದೆ. ಒಟ್ಟು ಸೋಂಕಿತರ ಸಂಖ್ಯೆ 28,91,699 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,31,226 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 36,323 ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 400 ಜನರಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. 781 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 8354 ಸಕ್ರಿಯ ಪ್ರಕರಣಗಳು ಇವೆ.
ಜಿಲ್ಲಾವಾರು ಸೋಂಕಿತರ ವಿವರ
ಬಾಗಲಕೋಟೆ 8, ಬಳ್ಳಾರಿ 10, ಬೆಳಗಾವಿ 90, ಬೆಂಗಳೂರು ಗ್ರಾಮಾಂತರ 41, ಬೆಂಗಳೂರು ನಗರ 400, ಬೀದರ್ 2, ಚಾಮರಾಜನಗರ 30, ಚಿಕ್ಕಬಳ್ಳಾಪುರ 17, ಚಿಕ್ಕಮಗಳೂರು 69, ಚಿತ್ರದುರ್ಗ 10, ದಕ್ಷಿಣ ಕನ್ನಡ 295, ದಾವಣಗೆರೆ 20, ಧಾರವಾಡ 6, ಗದಗ 3, ಹಾಸನ 83, ಹಾವೇರಿ 4, ಕಲಬುರ್ಗಿ 7, ಕೊಡಗು 62, ಕೋಲಾರ 34, ಕೊಪ್ಪಳ 3, ಮಂಡ್ಯ 38, ಮೈಸೂರು 157, ರಾಯಚೂರು 1, ರಾಮನಗರ 8, ಶಿವಮೊಗ್ಗ 74, ತುಮಕೂರು 72, ಉಡುಪಿ 131, ಉತ್ತರಕನ್ನಡ 23, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೃತರ ಸಂಖ್ಯೆ
ಇವತ್ತು ಬಳ್ಳಾರಿಯಲ್ಲಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 3, ಚಾಮರಾಜನಗರ 1, ದಕ್ಷಿಣ ಕನ್ನಡ 4, ದಾವಣಗೆರೆ 1, ಧಾರವಾಡ 2, ಗದಗ 1, ಹಾವೇರಿ 1, ಕೊಡಗು 1, ಕೋಲಾರ 4, ಮಂಡ್ಯ 1, ಮೈಸೂರು 3, ಶಿವಮೊಗ್ಗ 2, ತುಮಕೂರು 1, ಉಡುಪಿ 1, ಉತ್ತರಕನ್ನಡ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.