ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1990 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇವತ್ತು 45 ಸೋಂಕಿತರು ಮೃತಪಟ್ಟಿದ್ದಾರೆ. ಇಂದು 2537 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 33,642 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 1.59 ರಷ್ಟು ಇದೆ.
ರಾಜ್ಯದಲ್ಲಿ ಇದುವರೆಗೆ 28,06,933 ಜನ ಗುಣಮುಖರಾಗಿದ್ದಾರೆ. 35,989 ಜನ ಮೃತಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,76,587 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇವತ್ತು 400 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 490 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8 ಮಂದಿ ಮೃತಪಟ್ಟಿದ್ದಾರೆ. 12,573 ಸಕ್ರಿಯ ಪ್ರಕರಣಗಳಿವೆ.
ಬೆಳಗಾವಿಯಲ್ಲಿ ಇಂದು 140, ದಕ್ಷಿಣಕನ್ನಡ 219, ಹಾಸನ 175, ಮೈಸೂರು 211, ಉಡುಪಿ 120 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಯಾದಗಿರಿ 0, ವಿಜಯಪುರ 7, ರಾಯಚೂರು 1, ಗದಗ 7, ಚಿತ್ರದುರ್ಗ 4, ಬೀದರ್ 2, ಬಾಗಲಕೋಟೆ 4 ಜನರಿಗೆ ಸೋಂಕು ತಗುಲಿದೆ.
ಬೆಳಗಾವಿ ಜಿಲ್ಲೆಯಲ್ಲಿ 4, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ 3, ದಕ್ಷಿಣಕನ್ನಡ 6, ಮೈಸೂರು 6 ಜನ ಸೇರಿದಂತೆ 45 ಮಂದಿ ಸೋಂಕಿತರು ರಾಜ್ಯದಲ್ಲಿಂದು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಜುಲೈ 14 ಬೆಳಗ್ಗೆ 7 ಗಂಟೆಯವರೆಗೆ 2,13,65,071 ಜನರಿಗೆ ಮೊದಲ ಡೋಸ್, 48,46,702 ಜನರಿಗೆ ಎರಡನೇ ಡೋಸ್ ಸೇರಿದಂತೆ 2,62,11,773 ಡೋಸ್ ಕೊರೋನಾ ಲಸಿಕೆ ನೀಡಲಾಗಿದೆ.