ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1350 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,37,427 ಕ್ಕೆ ಏರಿಕೆಯಾಗಿದೆ.
ಇವತ್ತು 1648 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,79,433 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು 18 ಜನ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 37,123 ಜನ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.85 ರಷ್ಟು ಇದೆ. 20,845 ಸಕ್ರಿಯ ಪ್ರಕರಣಗಳಿವೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 260 ಜನರಿಗೆ ಸೋಂಕು ತಗುಲಿದ್ದು 374 ಜನ ಬಿಡುಗಡೆಯಾಗಿದ್ದಾರೆ. 7797 ಸಕ್ರಿಯ ಪ್ರಕರಣಗಳು ಇವೆ. ಇಂದು ಓರ್ವ ಸೋಂಕಿತ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಮಾಹಿತಿ:
ಬೆಂಗಳೂರು ನಗರ 260, ಬೆಳಗಾವಿ 43, ದಕ್ಷಿಣಕನ್ನಡ 320, ಹಾಸನ 101, ಕೊಡಗು 63, ಮೈಸೂರು 102, ಶಿವಮೊಗ್ಗ 50, ತುಮಕೂರು 68, ಉಡುಪಿ 177, ಉತ್ತರಕನ್ನಡ 40 ಹೊಸ ಪ್ರಕರಣ ವರದಿಯಾಗಿವೆ.
ಯಾದಗಿರಿ 0, ವಿಜಯಪುರ 6, ರಾಮನಗರ 3, ರಾಯಚೂರು 0, ಕೊಪ್ಪಳ 0, ಕಲ್ಬುರ್ಗಿ 2, ಹಾವೇರಿ 0, ಗದಗ 2, ಧಾರವಾಡ 5, ಚಿಕ್ಕಬಳ್ಳಾಪುರ 2, ಚಾಮರಾಜನಗರ 6, ಬೀದರ್ 1, ಬೆಂಗಳೂರು ಗ್ರಾಮಾಂತರ 5, ಬಳ್ಳಾರಿ 2, ಹಾಗೂ ಬಾಗಲಕೋಟೆ 1 ಪ್ರಕರಣ ವರದಿಯಾಗಿದೆ.
ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ:
ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಮಗಳೂರು ನಗರ 1, ದಕ್ಷಿಣ ಕನ್ನಡ 4, ದಾವಣಗೆರೆ 1, ಹಾಸನ 2, ಹಾವೇರಿ 1, ಕೋಲಾರ 2, ಮೈಸೂರು 1, ರಾಮನಗರ 1, ಶಿವಮೊಗ್ಗ 2 ಸೇರಿ 18 ಸೋಂಕಿತರು ಮತಪಟ್ಟಿದ್ದಾರೆ.