ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಪ್ರಕರಣ ಕಡಿಮೆಯಾಗಿದ್ದು, 889 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,67,083 ಕ್ಕೆ ಏರಿಕೆಯಾಗಿದೆ. ಇವತ್ತು 1080 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,13,713 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು 14 ಜನ ಮೃತಪಟ್ಟಿದ್ದಾರೆ. ಇದುವರೆಗೆ 37,587 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 15,755 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.63 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 263 ಜನರಿಗೆ ಸೋಂಕು ತಗುಲಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 222 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 7491 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿತರ ಮಾಹಿತಿ:
ಬಾಗಲಕೋಟೆ 3, ಬೀದರ್ 2, ಚಿಕ್ಕಬಳ್ಳಾಪುರ 0, ಗದಗ 1, ಹಾವೇರಿ 0, ಕಲಬುರ್ಗಿ 4, ಕೊಪ್ಪಳ 0, ರಾಯಚೂರು 1, ರಾಮನಗರ 3, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 263, ದಕ್ಷಿಣಕನ್ನಡ 133, ಹಾಸನ 40, ಕೊಡಗು 45, ಮೈಸೂರು 74, ಉಡುಪಿ 86, ಉತ್ತರಕನ್ನಡ 44 ಹೊಸ ಪ್ರಕರಣ ವರದಿಯಾಗಿವೆ.
ಮೃತಪಟ್ಟವರ ಸಂಖ್ಯೆ:
ಬೆಂಗಳೂರು ನಗರ 6, ದಕ್ಷಿಣಕನ್ನಡ 2, ಹಾಸನ 1, ಕೋಲಾರ 1, ಶಿವಮೊಗ್ಗ 1, ತುಮಕೂರು 1, ಉಡುಪಿ 2 ಸೇರಿ ರಾಜ್ಯದಲ್ಲಿ 14 ಜನ ಸೋಂಕಿತರು ಮೃತಪಟ್ಟಿದ್ದಾರೆ.