ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1785 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,13,512 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,12,368 ಜನ ಗುಣಮುಖರಾಗಿದ್ದು, 36,705 ಸೋಂಕಿತರು ಸಾವನ್ನಪ್ಪಿದ್ದಾರೆ.
ಪಾಸಿಟಿವಿಟಿ ದರ ಶೇಕಡ 1.10 ರಷ್ಟು ಇದೆ. ಇವತ್ತು 1651 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 25 ಸೋಂಕಿತರು ಸಾವನ್ನಪ್ಪಿದ್ದಾರೆ. 24,414 ಸಕ್ರಿಯ ಪ್ರಕರಣಗಳು ಇದ್ದು, 1,61,662 ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರಿನಲ್ಲಿ 414 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. 554 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. 8560 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಗಳ ವಿವರ:
ಬಾಗಲಕೋಟೆ 6, ಬಳ್ಳಾರಿ 6, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 40, ಬೆಂಗಳೂರು ನಗರ 414, ಬೀದರ್ 1, ಚಾಮರಾಜನಗರ 44, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 97, ಚಿತ್ರದುರ್ಗ 26, ದಕ್ಷಿಣಕನ್ನಡ 337, ದಾವಣಗೆರೆ 10, ಧಾರವಾಡ 10, ಗದಗ 5, ಹಾಸನ 125, ಹಾವೇರಿ 3, ಕಲಬುರ್ಗಿ 9, ಕೊಡಗು 100, ಕೋಲಾರ 57, ಕೊಪ್ಪಳ 7, ಮಂಡ್ಯ 46, ಮೈಸೂರು 105, ರಾಯಚೂರು 7, ರಾಮನಗರ 8, ಶಿವಮೊಗ್ಗ 35, ತುಮಕೂರು 49, ಉಡುಪಿ 134, ಉತ್ತರ ಕನ್ನಡ 60, ವಿಜಯಪುರ 5, ಯಾದಗಿರಿ 0 ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ 3, ಬೆಂಗಳೂರು ನಗರ 5, ದಕ್ಷಿಣ ಕನ್ನಡ 3, ಗದಗ 1, ಹಾವೇರಿ 1, ಕೊಡಗು 1, ಕೋಲಾರ 3, ಕೊಪ್ಪಳ 1, ಮಂಡ್ಯ 2, ಮೈಸೂರು 2, ಉಡುಪಿ 2, ಉತ್ತರಕನ್ನಡ 1 ಸೇರಿದಂತೆ ರಾಜ್ಯದಲ್ಲಿ ಇವತ್ತು 25 ಸೋಂಕಿತರು ಸಾವನ್ನಪ್ಪಿದ್ದಾರೆ.