ಬೆಂಗಳೂರು: ರಾಜ್ಯದಲ್ಲಿ ಇಂದು 1890 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,03,137 ಕ್ಕೆ ಏರಿಕೆಯಾಗಿದೆ.
ಇಂದು 34 ಮಂದಿ ಮೃತಪಟ್ಟಿದ್ದು, ಇದುವರೆಗೆ 36,525 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 1631 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 28,43,110 ಜನ ಗುಣಮುಖರಾಗಿದ್ದಾರೆ. 23,478 ಸಕ್ರಿಯ ಪ್ರಕರಣಗಳು ಇವೆ. ಇವತ್ತು 1,45,197 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ಶೇಕಡ 1.30 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ 426 ಮಂದಿಗೆ ಸೋಂಕು ತಗುಲಿದ್ದು, 366 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 9 ಸೋಂಕಿತರು ಮೃತಪಟ್ಟಿದ್ದಾರೆ.
ಜಿಲ್ಲಾವಾರು ಮಾಹಿತಿ
ಬಾಗಲಕೋಟೆ 2, ಬಳ್ಳಾರಿ 20, ಬೆಳಗಾವಿ 103, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 426, ಬೀದರ್ 4, ಚಾಮರಾಜನಗರ 27, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 88, ಚಿತ್ರದುರ್ಗ 31, ದಕ್ಷಿಣಕನ್ನಡ 345, ದಾವಣಗೆರೆ 4, ಧಾರವಾಡ 9, ಗದಗ 2, ಹಾಸನ 135, ಹಾವೇರಿ 2, ಕಲಬುರ್ಗಿ 6, ಕೊಡಗು 77, ಕೋಲಾರ 28, ಕೊಪ್ಪಳ 1, ಮಂಡ್ಯ 48, ಮೈಸೂರು 142, ರಾಯಚೂರು 1, ರಾಮನಗರ 9, ಶಿವಮೊಗ್ಗ 88, ತುಮಕೂರು 54, ಉಡುಪಿ 155, ಉತ್ತರಕನ್ನಡ 47, ವಿಜಯಪುರ 8, ಯಾದಗಿರಿ 1 ಹೊಸ ಪ್ರಕರಣ ವರದಿಯಾಗಿದೆ.
ಮೃತಪಟ್ಟವರ ಸಂಖ್ಯೆ
ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 9, ಚಿಕ್ಕಮಗಳೂರು 2, ದಕ್ಷಿಣಕನ್ನಡ 7, ಧಾರವಾಡ 1, ಹಾಸನ 1, ಕಲಬುರಗಿ 1, ಕೊಡಗು 1, ಕೋಲಾರ 2, ಮೈಸೂರು 2, ಶಿವಮೊಗ್ಗ 1, ಉಡುಪಿ 1, ಉತ್ತರಕನ್ನಡ 2, ವಿಜಯಪುರ 1 ಸೇರಿದಂತೆ ರಾಜ್ಯದಲ್ಲಿ 34 ಸೋಂಕಿತರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.