ಬೆಂಗಳೂರು: ರಾಜ್ಯದಲ್ಲಿಂದು 11698 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವಿಟಿ ದರ ಶೇಕಡ 7.77 ಕ್ಕೆ ಏರಿಕೆಯಾಗಿದೆ. 1148 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿಂದು 4 ಸೋಂಕಿತರು ಸಾವನ್ನಪ್ಪಿದ್ದಾರೆ. 1,50,479 ಪರೀಕ್ಷೆ ನಡೆಸಲಾಗಿದೆ. 60,470 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ 9221 ಜನರಿಗೆ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದಾರೆ. 49 ಸಾವಿರಕ್ಕೂ ಅಧಿಕ ಸಕ್ರಿಯ ಕೇಸ್ ಗಳಿವೆ.