ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1240 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,51,844 ಕ್ಕೆ ಏರಿಕೆಯಾಗಿದೆ.
ಇಂದು 1252 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 28,96,079 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 22 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 37,361 ಸೋಂಕಿತರು ಸಾವನ್ನಪ್ಪಿದ್ದಾರೆ
ಇವತ್ತು 1,65,386 ಪರೀಕ್ಷೆ ನಡೆಸಲಾಗಿದೆ. 18,378 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.74 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 319 ಜನರಿಗೆ ಸೋಂಕು ತಗುಲಿದ್ದು, 264 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಾಲ್ವರು ಸೋಂಕಿತರು ಸಾವನ್ನಪ್ಪಿದ್ದಾರೆ. 7609 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿತರ ಮಾಹಿತಿ:
ಬಾಗಲಕೋಟೆ 1, ಬಳ್ಳಾರಿ 7, ಬೀದರ್ 0, ಚಿಕ್ಕಬಳ್ಳಾಪುರ 0, ದಾವಣಗೆರೆ 6, ಗದಗ 1, ಹಾವೇರಿ 0, ಕಲಬುರ್ಗಿ 3, ಕೊಪ್ಪಳ 5, ರಾಯಚೂರು 2, ರಾಮನಗರ 1, ವಿಜಯಪುರ 2, ಯಾದಗಿರಿ 1 ಪ್ರಕರಣ ವರದಿಯಾಗಿದೆ.
ಬೆಂಗಳೂರು ನಗರ 319, ದಕ್ಷಿಣಕನ್ನಡ 264, ಹಾಸನ 76, ಕೊಡಗು 52, ಮೈಸೂರು 88, ಉಡುಪಿ 111 ಹಾಗೂ ಉತ್ತರಕನ್ನಡದಲ್ಲಿ 42 ಪ್ರಕರಣ ದಾಖಲಾಗಿವೆ.
ಮೃತರ ಸಂಖ್ಯೆ:
ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 4, ಬೀದರ್ 1, ಚಾಮರಾಜನಗರ 1, ದಕ್ಷಿಣಕನ್ನಡ 5, ಕೋಲಾರ 1, ಮಂಡ್ಯ 2, ಮೈಸೂರು 2, ತುಮಕೂರು 1, ಉಡುಪಿ 1 ಸೇರಿದಂತೆ ರಾಜ್ಯದಲ್ಲಿ 22 ಜನ ಸೋಂಕಿತರು ಮೃತಪಟ್ಟಿದ್ದಾರೆ.