
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 161 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಕಳೆದ 24 ಗಂಟೆಯಲ್ಲಿ 4967 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 3.24 ರಷ್ಟು ಇದೆ.
ರಾಜ್ಯದಲ್ಲಿ 528 ಸಕ್ರಿಯ ಪ್ರಕರಣಗಳಿದ್ದು, 129 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬೆಂಗಳೂರು 79, ಚಿಕ್ಕಮಗಳೂರು 15, ಬಳ್ಳಾರಿ 6, ಮೈಸೂರು 8, ಕೊಪ್ಪಳ 5, ಧಾರವಾಡ 8 ಸೇರಿ ರಾಜ್ಯದಲ್ಲಿ 161 ಜನರಿಗೆ ಕೊರೋನಾ ಸೋಂಕು ತಗುಲಿದೆ.
ಮೈಸೂರಿನಲ್ಲಿ ಇಂದು ಕೊರೋನಾ ಸೋಂಕಿತರೊಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.