ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1186 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 29,19,711 ಕ್ಕೆ ಏರಿಕೆಯಾಗಿದೆ
ಇದುವರೆಗೆ 36,817 ಜನ ಮೃತಪಟ್ಟಿದ್ದಾರೆ. 28,59,552 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 24 ಮಂದಿ ಸೋಂಕಿತರು ಮೃತಪಟ್ಟಿದ್ದು, 1776 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.89 ರಷ್ಟಿದೆ. 23,316 ಸಕ್ರಿಯ ಪ್ರಕರಣಗಳು ಇವೆ. ಇಂದು 1,32,192 ಪರೀಕ್ಷೆ ನಡೆಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 296 ಜನರಿಗೆ ಸೋಂಕು ತಗುಲಿದ್ದು, 410 ಮಂದಿ ಬಿಡುಗಡೆಯಾಗಿದ್ದಾರೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದಾರೆ. 8,378 ಸಕ್ರಿಯ ಪ್ರಕರಣಗಳು ಇವೆ.
ಜಿಲ್ಲಾವಾರು ಸೋಂಕಿತರ ವಿವರ:
ಬಾಗಲಕೋಟೆ 0, ಬಳ್ಳಾರಿ 6, ಬೀದರ್ 1, ಚಿಕ್ಕಬಳ್ಳಾಪುರ 7, ದಾವಣಗೆರೆ 4, ಧಾರವಾಡ 1, ಗದಗ 3, ಹಾವೇರಿ 1, ಕಲ್ಬುರ್ಗಿ 6, ಕೊಪ್ಪಳ 5, ರಾಯಚೂರು 0, ರಾಮನಗರ 2, ವಿಜಯಪುರ 1, ಯಾದಗಿರಿ 1 ಹೊಸ ಪ್ರಕರಣ ವರದಿಯಾಗಿದೆ.
ಅದೇ ರೀತಿ, ಉಡುಪಿ 81, ಮೈಸೂರು 82, ಕೊಡಗು 83, ಹಾಸನ 54, ದಕ್ಷಿಣಕನ್ನಡ 273, ಬೆಂಗಳೂರು ನಗರ 296 ಜನರಿಗೆ ಸೋಂಕು ತಗುಲಿದೆ.
ಮೃತಪಟ್ಟವರ ಸಂಖ್ಯೆ:
ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 1, ಚಿಕ್ಕಬಳ್ಳಾಪುರ 1, ದಕ್ಷಿಣ ಕನ್ನಡ 3, ದಾವಣಗೆರೆ 1, ಧಾರವಾಡ 2, ಹಾಸನ 2, ಹಾವೇರಿ 1, ಕೋಲಾರ 3, ಮೈಸೂರು 1, ಶಿವಮೊಗ್ಗ 1 ತುಮಕೂರು 2, ಉಡುಪಿ 3, ಉತ್ತರಕನ್ನಡ 2 ಸೇರಿ ರಾಜ್ಯದಲ್ಲಿಂದು 24 ಸೋಂಕಿತರು ಸಾವನ್ನಪ್ಪಿದ್ದಾರೆ.