ನವದೆಹಲಿ: ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಒಪ್ಪಿಗೆ ನೀಡಿದ್ದ ಸರ್ಕಾರ, ದೇಶಾದ್ಯಂತ ಮಕ್ಕಳಿಗೆ ಲಸಿಕೆ ನೀಡಲು ಅಭಿಯಾನ ಕೈಗೊಳ್ಳುವ ಕುರಿತಾಗಿ ನಿರ್ಧಾರ ಕೈಗೊಳ್ಳಲಿದೆ.
ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಮಕ್ಕಳಿಗೆ ನೀಡುವ ಜೈಡಸ್ –ಡಿ ಲಸಿಕೆ ಬಳಕೆಗೆ ಒಪ್ಪಿಗೆ ನೀಡಲಾಗಿದ್ದು, ದೇಶಾದ್ಯಂತ ಮಕ್ಕಳಿಗೆ ಲಸಿಕೆ ನೀಡಲು ಆದ್ಯತೆ ಮತ್ತು ಮಾರ್ಗಸೂಚಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.
ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ. ಎನ್.ಕೆ. ಆರೋರಾ, 12 ರಿಂದ 18 ವರ್ಷ ವಯೋಮಿತಿಯ 12 ಕೋಟಿ ಮಕ್ಕಳಿಗೆ ಶೀಘ್ರವೇ ಲಸಿಕೆ ನೀಡುವ ಬಗ್ಗೆ ಆದ್ಯತಾ ಪಟ್ಟಿ ತಯಾರಿಸಲಾಗುವುದು. ಅಭಿಯಾಯನ ಕೈಗೊಳ್ಳಲು ಶೀಘ್ರವೇಶ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.