ಕಳೆದ ಎರಡು ಮೂರು ದಿನಗಳಿಂದ ಮತ್ತೆ ಕೊರೋನಾ ಬಂದಿದೆ ಎನ್ನುವ ಆತಂಕ ಜನಸಾಮಾನ್ಯರಲ್ಲಿ ಹೆಚ್ಚಾಗಿದೆ. ಆದರೆ, ಓಮಿಕ್ರಾನ್ ರೂಪಾಂತರ ತಳಿ ಜೆಎನ್.1 ಅಂತಹ ಅಪಾಯಕಾರಿ ಏನೂ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದರೂ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಸಣ್ಣ, ಶೀತ ಜ್ವರ ಬಂದರೂ ಜನ ಆತಂಕದಿಂದ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಈ ಹಿಂದೆ ಕೊರೋನಾ ಅಬ್ಬರಿಸಿದಾಗ ತಲ್ಲಣಗೊಂಡಿದ್ದ ಜನರಲ್ಲೀಗ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಆದರೆ, ಆತಂಕ ಪಡುವ ಅಗತ್ಯವೇ ಇಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ ಆತಂಕ, ಭಯಕ್ಕಿಂತ ಮುಖ್ಯವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಖ್ಯಾತ ವೈದ್ಯ ಡಾ. ರಾಜು ಕೃಷ್ಣಮೂರ್ತಿ ಸಲಹೆ ನೀಡಿದ್ದಾರೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇಶದಾದ್ಯಂತ ಹರಡುತ್ತಿದೆ. ಕರ್ನಾಟಕದಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಎರಡು ಮೂರು ದಿನಗಳಿಂದ ಮಾಧ್ಯಮಗಳಲ್ಲಿ ವರದಿಯಾಗಿದೆ. ಜನ ಭಯದಿಂದ ನೆಗಡಿ ಆದ ಕೂಡಲೇ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಹೀಗೆಲ್ಲಾ ಆತಂಕ ಬೇಡವೆಂದು ಅವರು ತಿಳಿಸಿದ್ದಾರೆ.
ಶೇಕಡ 100ರಷ್ಟು ಕೊರೋನಾ ಮತ್ತೆ ಬರಲ್ಲ, ನೆಗಡಿ, ಜ್ವರ ಇನ್ಫೆಕ್ಷನ್ ಹೊರರೂ ಯಾವುದೇ ಅಪಾಯಕಾರಿಯಲ್ಲ. ಮತ್ತೆ ಕೊರೋನಾ ಕುರಿತಾದ ಆತಂಕ ಬೇಡ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.