ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಕೊರೋನಾ ಲಸಿಕೆಗೆ ಹೆದರಿ ವ್ಯಕ್ತಿಯೊಬ್ಬ ಮನೆ ಮೇಲೆ ಹತ್ತಿದ್ದಾನೆ. ಕೊನೆಗೆ ಅಧಿಕಾರಿಗಳು ಕೂಡ ಮನೆ ಮೇಲೆ ಹತ್ತಿ ಆತನ ಮನವೊಲಿಸಿದ್ದಾರೆ.
ಬೂದಗುಂಪಾ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಲು ಬಂದಾಗ ಲಸಿಕೆ ಬೇಡವೆಂದು ಹೇಳಿದ ವ್ಯಕ್ತಿ ಮೈಮೇಲೆ ದೇವರು ಬಂದಂತೆ ವರ್ತಿಸಿ ಮನೆ ಮೇಲೆ ಹತ್ತಿದ್ದಾನೆ. ಗಂಟೆ ಬಾರಿಸುತ್ತಾ ನನಗೆ ಕುದುರೆ ಬೇಕು ಎಂದೆಲ್ಲಾ ಕೇಳಿ ರಂಪಾಟ ಮಾಡಿದ್ದಾನೆ. ಈತನ ವರ್ತನೆಯಿಂದ ಹೈರಾಣಾದ ಆರೋಗ್ಯ ಇಲಾಖೆ ಸಿಬ್ಬಂದಿ ಕೊನೆಗೂ ಮನವೊಲಿಸಿ ಲಸಿಕೆ ಹಾಕಿದ್ದಾರೆ. ತುಮ್ಮರಿಕೊಪ್ಪ ಗ್ರಾಮದಲ್ಲಿ ಲಸಿಕೆ ಹಾಕಿಸಿಕೊಳ್ಳಲು ವೃದ್ಧೆಯೊಬ್ಬರು ರಂಪಾಟ ನಡೆಸಿದ್ದಾರೆ. ನಾನು ಲಸಿಕೆ ಪಡೆಯುವುದಿಲ್ಲವೆಂದು ಹಠ ಮಾಡಿದ್ದಾರೆನ್ನಲಾಗಿದೆ.