ನವದೆಹಲಿ: ಡಿಸೆಂಬರ್ 28, 29 ರಂದು 4 ರಾಜ್ಯಗಳಲ್ಲಿ ಲಸಿಕೆ ನೀಡಿಕೆ ತಾಲೀಮು ಆರಂಭವಾಗಲಿದೆ. ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್ ನಲ್ಲಿ ರಿಹರ್ಸಲ್ ನಡೆಯಲಿದೆ.
ಈ ಸಂದರ್ಭದಲ್ಲಿ ನೋಂದಣಿ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕೊರೋನಾ ಲಸಿಕೆಗೆ ಒಪ್ಪಿಗೆ ದೊರೆತ ಕೂಡಲೇ ಅದನ್ನು ಜನರಿಗೆ ನೀಡಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಂಡಿದೆ. ಲಸಿಕೆ ನೀಡಲು ದೇಶ ಹೇಗೆ ತಯಾರಾಗಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಪ್ರಯೋಗ ಆರಂಭಿಸಲಾಗಿದೆ. ಅಣಕು ಕಾರ್ಯಾಚರಣೆಯಲ್ಲಿ ಕೊರೊನಾ ಲಸಿಕೆ ಬಿಟ್ಟು ಉಳಿದೆಲ್ಲ ಚಟುವಟಿಕೆ ಇರುತ್ತದೆ. ವೆಬ್ಸೈಟ್ ನಲ್ಲಿ ಲಸಿಕೆ ಫಲಾನುಭವಿಗಳ ಹೆಸರನ್ನು ನೋಂದಣಿ ಮಾಡಲಾಗುವುದು. ಲಸಿಕೆ ಸಾಗಣೆ, ಆನ್ಲೈನ್ ಮೇಲ್ವಿಚಾರಣೆ, ಲಸಿಕೆ ಪಡೆಯುವವರ ಆಯ್ಕೆ ಇರುತ್ತದೆ ಎಂದು ಹೇಳಲಾಗಿದೆ.