ನವದೆಹಲಿ: ಕೊರೋನಾ ಲಸಿಕೆ ಉತ್ಪಾದನೆಗೆ ಲೈಸೆನ್ಸ್ ನೀಡಿಕೆ ಕೊನೆ ಆಯ್ಕೆಯಾಗಿದೆ ಎಂದು ಸುಪ್ರೀಂಕೋರ್ಟ್ ಗೆ ತನ್ನ ನಿಲುವನ್ನು ಕೇಂದ್ರ ಸರ್ಕಾರ ತಿಳಿಸಿದೆ.
ಕಂಪಲ್ಸರಿ ಲೈಸೆನ್ಸ್ ಏಕೆ ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಇದರಿಂದ ಬಯಸದ ಪರಿಣಾಮ ಉಂಟಾಗಬಹುದೆಂದು ಕೇಂದ್ರ ಸರ್ಕಾರದ ನಿಲುವು ತಿಳಿಸಲಾಗಿದೆ. ಈಗಾಗಲೇ ಎರಡು ಕಂಪನಿಗಳು ಹಣಕಾಸಿನ ರಿಸ್ಕ್ ತೆಗೆದುಕೊಂಡಿದೆ. ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ರಿಸ್ಕ್ ತೆಗೆದುಕೊಂಡಿವೆ ಎಂದು ಹೇಳಲಾಗಿದೆ. ಹೀಗಾಗಿ ಕಂಪಲ್ಸರಿ ಲೈಸೆನ್ಸ್ ನೀಡಿಕೆ ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದೆ.
ಕಂಪಲ್ಸರಿ ಲೈಸೆನ್ಸ್ ನೀಡಿಕೆ ಕೊನೆಯ ಆಯ್ಕೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಲಸಿಕೆ ಉತ್ಪಾದಿಸುವ 21 ಕಂಪನಿಗಳಿದ್ದು, 10 -15 ಕಂಪನಿಗಳಿಗೆ ಲೈಸೆನ್ಸ್ ನೀಡಿದರೂ ಲಸಿಕೆ ಉತ್ಪಾದನೆ ದೇಶದಲ್ಲಿ ಹೆಚ್ಚಾಗಬಹುದು. ಇದರಿಂದ ಭಾರತದಲ್ಲಿ ಲಸಿಕೆಯ ಕೊರತೆ ಸ್ವಲ್ಪಮಟ್ಟಿಗೆ ನೀಗಬಹುದಾಗಿದೆ ಎನ್ನಲಾಗಿದೆ.