ಬೆಂಗಳೂರು: ಮೇ 10 ರಿಂದ ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು.
ಈ ವಯಸ್ಸಿನ ಫಲಾನುಭವಿಗಳು ಆನ್ಲೈನ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು ಹಾಗೂ ನೋಂದಾವಣೆಯ ನಂತರ ತಮ್ಮ ಮೊಬೈಲ್ ನಲ್ಲಿ ಸಮಯ ನಿಗದಿಯ SMS ಸ್ವೀಕರಿಸಿರಬೇಕು. ಈಗಾಗಲೇ ಹೆಸರು ನೋಂದಾಯಿಸಿಕೊಂಡವರ ಮೊಬೈಲ್‍ಗೆ ಲಸಿಕಾ ಕೇಂದ್ರ ಹಾಗೂ ಲಸಿಕೆ ನೀಡುವ ಸಮಯವನ್ನು ಕಳುಹಿಸಲಾಗುವುದು.
ಫಲಾನುಭವಿಗಳು ಮೊಬೈಲ್ ನಲ್ಲಿ ಸ್ವೀಕರಿಸಿದ SMS ಅನ್ನು ಪರಿಶೀಲಿಸಿದ ನಂತರವಷ್ಟೇ ಪೊಲೀಸ್ ಸಿಬ್ಬಂದಿಗಳು ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡುವರು ಎಂದು ಹೇಳಲಾಗಿದೆ.