ಬೆಂಗಳೂರು: ಹಿರಿಯ ನಾಗರಿಕರಿಗೆ ಮನೆ ಸಮೀಪವೇ ಲಸಿಕೆ ನೀಡಲು ಸರ್ಕಾರ ಕ್ರಮಕೈಗೊಂಡಿದೆ. ಹಿರಿಯ ನಾಗರಿಕರು, ವಿಕಲಚೇತನರು ಲಸಿಕ ಕೇಂದ್ರಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮನೆಯ ಸಮೀಪದಲ್ಲೇ ಲಸಿಕೆ ಕೇಂದ್ರಗಳ ಮೂಲಕ ನೀಡಲಾಗುವುದು.
ಸ್ಥಳೀಯ ಬಡಾವಣೆ ಸಮುದಾಯ ಕೇಂದ್ರ, ನಿವಾಸಿ ಕಲ್ಯಾಣ ಸಂಘಗಳ ಕೇಂದ್ರಗಳು, ಪಂಚಾಯಿತಿ ಕಟ್ಟಡ, ಶಾಲೆ-ಕಾಲೇಜುಗಳಲ್ಲಿ ಕೊರೋನಾ ಲಸಿಕಾ ಕೇಂದ್ರಗಳನ್ನು ತೆರೆದು ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಇನ್ನು 45 ವರ್ಷ ಮೇಲ್ಪಟ್ಟವರಿಗೆ ಆನ್ಲೈನ್ ಮೂಲಕ ಲಸಿಕೆಗೆ ನೋಂದಾಯಿಸಲು ಅವಕಾಶವಿದೆ. ಇದರ ಜೊತೆಗೆ ಲಸಿಕ ಕೇಂದ್ರಕ್ಕೆ ತೆರಳಿ ಆನ್ ಸೈಟ್ ಮೂಲಕವೂ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.