ಪುಣೆ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೊರೋನಾ ಕೊವಿಶೀಲ್ಡ್ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ.
ಬೆಳಗಿನ ಜಾವ 5 ಗಂಟೆಯಿಂದಲೇ ಭಾರೀ ಸಿದ್ಧತೆ ಮತ್ತು ಭದ್ರತೆಯೊಂದಿಗೆ ಕೊರೋನಾ ಲಸಿಕೆಯನ್ನು ಸರಬರಾಜು ಮಾಡಲಾಗುತ್ತಿದೆ. ಪುಣೆಯಿಂದ 8 ವಿಮಾನಗಳಲ್ಲಿ ದೇಶದ 13 ಸ್ಥಳಗಳಿಗೆ ಲಸಿಕೆ ಸಾಗಾಟ ಆರಂಭವಾಗಿದೆ.
ದೆಹಲಿ, ಹರಿಯಾಣದ ಕರ್ನಲ್, ಅಹಮದಾಬಾದ್, ಚಂಡಿಗಢ, ಬೆಂಗಳೂರು, ಹೈದರಾಬಾದ್, ಭುವನೇಶ್ವರ, ಕೋಲ್ಕತ್ತಾ, ಗುವಾಹಟಿ ಸೇರಿದಂತೆ 13 ಸ್ಥಳಗಳಿಗೆ ಕೊವಿಶೀಲ್ಡ್ ಲಸಿಕೆಯನ್ನು ಸೀರಮ್ ನಿಂದ ರವಾನೆ ಮಾಡಲಾಗಿದೆ. 10 ಗಂಟೆ ಸುಮಾರಿಗೆ ಮಹಾನಗರಗಳಿಗೆ ಲಸಿಕೆ ತಲುಪಲಿದ್ದು ಅಲ್ಲಿಂದ ಪ್ರಾದೇಶಿಕ ಕೇಂದ್ರಗಳಿಗೆ, ನಂತರ ಜಿಲ್ಲಾ ಕೇಂದ್ರಗಳಿಗೆ ಲಸಿಕೆ ಪೂರೈಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ಪ್ರತಿ ಡೋಸ್ ಗೆ 200 ರೂ. ಮತ್ತು 10 ರೂ. ಜಿಎಸ್ಟಿ ನಿಗದಿ ಮಾಡಲಾಗಿದೆ ಎನ್ನಲಾಗಿದೆ.