ನವದೆಹಲಿ: ದೇಶದ 12 -18 ವರ್ಷದ ಮಕ್ಕಳಿಗೆ ಕೊರೋನಾ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಆಗಸ್ಟ್ ನಲ್ಲಿ ಆರಂಭವಾಗಲಿದೆ.
ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತ ವಿಶ್ವದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಕೊರೋನಾ ಲಸಿಕೆ ಉತ್ಪಾದಿಸುವ ದೇಶವಾಗಲಿದೆ ಎಂದು ತಿಳಿಸಿದ್ದಾರೆ. 12 ರಿಂದ 18 ವರ್ಷದ ಮಕ್ಕಳಿಗೆ ಝೈಡಸ್ ಕ್ಯಾಡಿಲಾ ಕಂಪನಿಯ ಕೋವಿಡ್ ನಿರೋಧಕ ಲಸಿಕೆ ಸೆಪ್ಟೆಂಬರ್ ನಿಂದ ಸಿಗಲಿದ್ದು, ಅದಕ್ಕಿಂತ ಮೊದಲೇ ಭಾರತ್ ಬಯೋಟೆಕ್ ಕಂಪನಿಯ ಲಸಿಕೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.