ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗು 45 -59 ವರ್ಷದ ಆರೋಗ್ಯ ತೊಂದರೆಗಳು ಇರುವವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ.
ಮೊದಲ ಹಂತದಲ್ಲಿ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ ಫಲಾನುಭವಿಗಳು online ನಲ್ಲಿ ಆರೋಗ್ಯ ಸೇತು ಆಪ್ ಮುಖಾಂತರ ದಾಖಲು ಮಾಡಿಸಬಹುದು ಅಥವಾ ಆನ್ ಸೈಟ್ ಸ್ಪಾಟ್ ದಾಖಲಾತಿ ಮಾಡಿಕೊಂಡು ಲಸಿಕೆ ಪಡೆಯಬಹುದು.
ಎಲ್ಲಾ ಫಲಾನುಭವಿಗಳು ತಮ್ಮ ಯಾವುದಾದರು ಗುರುತಿನ ಚೀಟಿ(ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ , ವೋಟರ್ ಕಾರ್ಡ್, ಪೆನ್ಷನ್ ರೆಕಾರ್ಡ್) ಮತ್ತು ಮೊಬೈಲ್ ನಂಬರ್ ಜೊತೆಗೆ ಕೋವಿಡ್ ವ್ಯಾಕ್ಸಿನ್ ಸೆಂಟರ್ ಗೆ ಬಂದು ಲಸಿಕೆ ಪಡೆಯಬಹುದು.
ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತೀ ಡೋಸ್ ಗೆ 250 ರೂ. ಪಾವತಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಸಾರ್ವಜನಿಕರು ಈ ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ ಪಡೆಯುವಂತೆ ತಿಳಿಸಲಾಗಿದೆ. 45-59 ವರ್ಷ ವಯಸ್ಸಿನವರು ತಮ್ಮಗಳಿಗಿರುವ ಆರೋಗ್ಯ ಸಮಸ್ಯೆ ಬಗ್ಗೆ ವೈದ್ಯರಿಂದ(RMP) ಧೃಢೀಕರಣ ಪತ್ರ ತರುವುದು ಕಡ್ಡಾಯವಾಗಿರುತ್ತದೆ.