ನವದೆಹಲಿ: ಕೇಂದ್ರ ಸರ್ಕಾರ ಕೋವಿಶೀಲ್ಡ್ ಎರಡು ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಯೋಚಿಸುತ್ತಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಇಮ್ಯುನೈಸೇಶನ್ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(NTAGI) ಡೋಸೇಜ್ ಅಂತರವನ್ನು ನಿರ್ಧರಿಸುತ್ತದೆ. ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದನ್ನು ಪರಿಗಣಿಸಲಾಗುತ್ತಿದೆ. ಇದನ್ನು NTAGI ನಲ್ಲಿ ಮತ್ತಷ್ಟು ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಲಸಿಕೆಯ ಲಭ್ಯತೆ ಹೆಚ್ಚಿದ ಮೇಲೆ 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಎರಡು ಕೋವಿಶೀಲ್ಡ್ ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚರ್ಚಿಸುತ್ತಿದೆ ಎಂದು ಹೇಳಲಾಗಿದೆ.
ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಎಲ್ಲಾ ವಯಸ್ಕರಿಗೆ 12-16 ವಾರಗಳವರೆಗೆ ನಿಗದಿಪಡಿಸಲಾಗಿದೆ.
ಕೋವಿಶೀಲ್ಡ್ ಮತ್ತು ಇತರ ಲಸಿಕೆಗಳ ವಿಭಿನ್ನ ಡೋಸೇಜ್ ಅಂತರಗಳ ಪ್ರಯೋಗವನ್ನು NTAGI ಈ ಹಿಂದೆ ಶಿಫಾರಸು ಮಾಡಿತ್ತು. ಲಸಿಕೆಗಳ ನಡುವಿನ ವಿಭಿನ್ನ ಅಂತರಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಲಸಿಕೆಯ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಯನ್ನು ಕೇಳಿತು.
ಕೋವಿಶೀಲ್ಡ್‌ಗೆ ಶಿಫಾರಸು ಮಾಡಲಾದ ಡೋಸ್ ಅಂತರವು ಈ ವರ್ಷ ಜನವರಿಯಲ್ಲಿ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾದಾಗ ನಾಲ್ಕರಿಂದ ಆರು ವಾರಗಳಷ್ಟಿತ್ತು. ನಂತರ ಅದನ್ನು ಆರರಿಂದ ಎಂಟು ವಾರಗಳವರೆಗೆ ವಿಸ್ತರಿಸಲಾಯಿತು.
ಮೇ ತಿಂಗಳಲ್ಲಿ, ಸರ್ಕಾರವು ಡೋಸ್ ಅಂತರವನ್ನು 12 ರಿಂದ 16 ವಾರಗಳಿಗೆ ಪರಿಷ್ಕರಿಸಿತು. ಇದಕ್ಕೆ ಟೀಕೆಗಳು ಕೂಡ ವ್ಯಕ್ತವಾಗಿವೆ. ದೇಶದಲ್ಲಿ ಲಸಿಕೆಗಳ ಕೊರತೆ, ಹೆಚ್ಚಿನ ಡೋಸ್ ಸಂಗ್ರಹಿಸಲು ಸಮಯ ಬೇಕಾಗಿದ್ದರಿಂ ಎರಡು ಡೋಸ್ ನಡುವಿನ ಅಂತರ ಹೆಚ್ಚಿಸಲಾಗಿತ್ತು ಎನ್ನಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಆಗಸ್ಟ್ ಮೊದಲ ವಾರದಲ್ಲಿ ಮಾಸಿಕ ಕೊವಿಶೀಲ್ಡ್ ಮತ್ತು ಕೋವಾಕ್ಸಿನ್ ಉತ್ಪಾದನೆಯು ಕ್ರಮವಾಗಿ 12 ಕೋಟಿ ಮತ್ತು 5.8 ಕೋಟಿ ಡೋಸ್‌ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಲಸಿಕೆ ಉತ್ಪಾದಕರ ಮಾಹಿತಿಯ ಪ್ರಕಾರ, ಉತ್ಪಾದನಾ ಸಾಮರ್ಥ್ಯವು ಆಗಸ್ಟ್ ನಿಂದ ಡಿಸೆಂಬರ್‌ವರೆಗೆ ಹೆಚ್ಚಾಗುತ್ತದೆ ಎಂದು ಹೇಳಿದ್ದರು.
ಮಾಂಡವಿಯಾ ಅವರು ಇನ್ನೂ ನಾಲ್ಕು ಭಾರತೀಯ ಫಾರ್ಮಾ ಸಂಸ್ಥೆಗಳು ಕೊರೋನಾ ವೈರಸ್ ವಿರೋಧಿ ಲಸಿಕೆ ಉತ್ಪಾದನೆಯನ್ನು ಅಕ್ಟೋಬರ್-ನವೆಂಬರ್ ವೇಳೆಗೆ ಆರಂಭಿಸುವ ನಿರೀಕ್ಷೆಯಿದ್ದು, ಇದು ಇನಾಕ್ಯುಲೇಷನ್ ಡ್ರೈವ್ ಅನ್ನು ವೇಗಗೊಳಿಸುತ್ತದೆ.
ಪುಣೆ ಮೂಲದ ಎಸ್‌ಐಐ ಕೇಂದ್ರಕ್ಕೆ ಮಾಹಿತಿ ನೀಡಿ, ಸೆಪ್ಟೆಂಬರ್‌ನಲ್ಲಿಯೇ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ನ 20 ಕೋಟಿ ಡೋಸ್‌ಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಆಗಸ್ಟ್ ನಲ್ಲಿ 12 ಕೋಟಿ ಡೋಸ್ ಲಸಿಕೆಯನ್ನು ಪೂರೈಸಿದೆ ಎಂದು ತಿಳಿಸಿದೆ.
ಮೇ ತಿಂಗಳಲ್ಲಿ ಕೇಂದ್ರಕ್ಕೆ ಸಲ್ಲಿಸಿದ ಉತ್ಪಾದನಾ ಯೋಜನೆಯಲ್ಲಿ, ಎಸ್‌ಐಐ ನಿರ್ದೇಶಕರು ಕೋವಿಶೀಲ್ಡ್ ಉತ್ಪಾದನೆಯನ್ನು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ 10 ಕೋಟಿಯವರೆಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದರು.