ಲಸಿಕೆ ಸ್ಲಾಟ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಖುಷಿ ಸುದ್ದಿಯೊಂದಿದೆ. ಕೋವಿನ್ ಪೋರ್ಟಲ್ ಗೆ 91 ಅಪ್ಲಿಕೇಷನ್ ಗಳನ್ನು ಸೇರಿಸಲಾಗಿದೆ. ಹಾಗಾಗಿ ವಿಮಾನದ ಟಿಕೆಟ್ ಕಾಯ್ದಿರುಸುವಂತೆ ಲಸಿಕೆ ಸ್ಲಾಟ್ ಬುಕ್ ಮಾಡಬಹುದು.
ಕೋವಿನ್ ಪೋರ್ಟಲ್ಗೆ ಆರೋಗ್ಯಾ ಸೇತು ಮತ್ತು ಉಮಾಂಗ್ ಎಪಿಪಿ ಹೊರತುಪಡಿಸಿ 91 ಹೊಸ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಸೇರಿಸಲಾಗಿದೆ. ಹತ್ತು ರಾಜ್ಯ ಸರ್ಕಾರಗಳ ಬುಕಿಂಗ್ ಪ್ಲಾಟ್ಫಾರ್ಮ್ಗಳನ್ನು ಸಹ ಕೋವಿನ್ಗೆ ಲಿಂಕ್ ಮಾಡಲಾಗಿದೆ ಎಂದು ಕೋವಿನ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ.
ಪೇಟಿಎಂ, ಮ್ಯಾಕ್ಸ್ ಹೆಲ್ತ್ ಕೇರ್, ಇಂಡಿಗೊ ಸಹ ಕೋವಿನ್ಗೆ ಸಂಪರ್ಕ ಹೊಂದಿದೆ. ಮ್ಯಾಕ್ಸ್ ಹೆಲ್ತ್ ಕೇರ್, ಡಾ. ರೆಡ್ಡಿಸ್, ಮೇಕ್ ಮೈ ಟ್ರಿಪ್ ಸೇರಿದಂತೆ ಇತರ ಖಾಸಗಿ ಪ್ಲಾಟ್ಫಾರ್ಮ್ಗಳನ್ನು ಸಹ ಕೋವಿನ್ನೊಂದಿಗೆ ಸಂಯೋಜಿಸಲಾಗಿದೆ. ಈ ಯಾವುದೇ ಅಪ್ಲಿಕೇಷನ್ ನಲ್ಲಿ ಲಸಿಕೆ ಸ್ಲಾಟ್ ಬುಕ್ ಮಾಡಿದ್ರೆ ಅದು ಕೋವಿನ್ ಅಪ್ಲಿಕೇಷನ್ ಗೆ ಬರುತ್ತದೆ. ಹೆಚ್ಚಿನ ಅಪ್ಲಿಕೇಷನ್ ಗಳನ್ನು ಇದಕ್ಕೆ ಸೇರಿಸುವುದ್ರಿಂದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ಶರ್ಮಾ ಹೇಳಿದ್ದಾರೆ.