ಬೆಂಗಳೂರು: ಮೊದಲಿಗೆ ದ್ವಿತಿಯ ಪಿಯುಸಿ ಪರೀಕ್ಷೆಗಳನ್ನು ಈ ವರ್ಷ ನಡೆಸದಿರಲು ತೀರ್ಮಾನಿಸಲಾಗಿದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ಪಿಯು ಬೋರ್ಡ್ ಮಾನದಂಡದ ಆಧಾರದ ಮೇಲೆ ಎ ಪ್ಲಸ್, ಎ, ಬಿ, ಅನುಸಾರ ಪಾಸ್ ಮಾಡಲಾಗುವುದು. ಫಲಿತಾಂಶದ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳು ಕೋವಿಡ್ ನಂತರ ಪರೀಕ್ಷೆ ಬರೆಯಬಹುದು, ಅವರಿಗಾಗಿ ಪರೀಕ್ಷೆ ನಡೆಸಲಾಗುವುದು. ಈಗಿನ ನಿರ್ಧಾರದಂತೆ ಎಲ್ಲಾ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲಾಗುವುದು. ಈ ವರ್ಷ ಸೆಕೆಂಡ್ ಪಿಯುಸಿ ಪರೀಕ್ಷೆ ನಡೆಸುವುದಿಲ್ಲ. ಗ್ರೇಡ್ ಆಧಾರದಲ್ಲಿ ಪಾಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.