ನವದೆಹಲಿ: ಸೀರಂ ಇನ್ ಸ್ಟಿಟ್ಯೂಟ್ ನಿಂದ ಮಾರ್ಚ್, ಏಪ್ರಿಲ್ ನಲ್ಲಿ ಖಾಸಗಿಯಾಗಿಯೂ ಕೊರೋನಾ ಲಸಿಕೆ ನೀಡಲಾಗುವುದು. ಕೆಲವು ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಸಿಬ್ಬಂದಿಗಾಗಿ ಲಸಿಕೆ ಆರ್ಡರ್ ಮಾಡಿವೆ.
ಕೋವಿಶೀಲ್ಡ್ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಸಾಬೀತಾದ ಬಳಿಕ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಕೋವಿಶೀಲ್ಡ್ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸೀರಂ ಇನ್ ಸ್ಟಿಟ್ಯೂಟ್ ಸಿಇಒ ಆದಾರ್ ಪುನಾವಾಲ ಹೇಳಿದ್ದಾರೆ.
ಇದುವರೆಗೂ ಯಾವುದೇ ಕಂಪನಿ ಜೊತೆಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿಲ್ಲ. 30 ಕೋಟಿ ಲಸಿಕೆ ತೆಗೆದಿಡುವಂತೆ ನಮ್ಮ ಕಂಪನಿಗೆ ಹೇಳಲಾಗಿದೆ. ಆದರೆ, 2021 ರ ಜೂನ್ ವೇಳೆಗೆ 30 ಕೋಟಿ ಲಸಿಕೆ ಬೇಕೆಂದು ಹೇಳಿದೆ ಎಂದು ಆದಾರ್ ಪುನಾವಾಲ ತಿಳಿಸಿದ್ದಾರೆ.