ಬೆಂಗಳೂರು: ಕೊರೋನಾ ಸೋಂಕು ತಡೆಗೆ ರಾಜ್ಯದಲ್ಲಿ ಜಾರಿಗೊಳಿಸಿದ ನಿರ್ಬಂಧ ಸಡಿಲಗೊಳಿಸುವ ಸಾಧ್ಯತೆಯಿದೆ.
ಶಾಲೆ ಪುನರಾರಂಭಿಸುವ ಜೊತೆಗೆ ಹೋಟೆಲ್, ಚಿತ್ರಮಂದಿರಗಳಲ್ಲಿ ಶೇಕಡ 50 ರ ಮಿತಿ ರದ್ದು ಮಾಡುವ ಸಾಧ್ಯತೆ ಇದ್ದು, ಸೋಮವಾರದಿಂದ ನಿರ್ಬಂಧ ಸಡಿಲ ಮಾಡುವ ಸಾಧ್ಯತೆ ಇದೆ. ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುವುದರಿಂದ ನಿರ್ಬಂಧ ಸಡಿಲಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಜಾರಿ ಮಾಡಿದ್ದ ವೀಕೆಂಡ್ ಕರ್ಫ್ಯೂ ಹಿಂಪಡೆಯಲಾಗಿದೆ. ನೈಟ್ ಕರ್ಫ್ಯೂ, ಶೇ. 50 ರ ಮಿತಿ ಸೇರಿ ಹಲವು ನಿರ್ಬಂಧಗಳಿದ್ದು, ಇವುಗಳಲ್ಲಿ ಕೆಲವು ನಿರ್ಬಂಧ ಸಡಿಲಗೊಳಿಸುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ಜ. 31 ರಿಂದ ಶಾಲೆಗಳನ್ನು ಪುನಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ.