ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 25,979 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇವತ್ತು ಒಂದೇ ದಿನ ದಾಖಲೆ ಸಂಖ್ಯೆಯ 626 ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25,282 ಕ್ಕೆ ಏರಿಕೆಯಾಗಿದೆ.
ಇವತ್ತು 35,573 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 19,26,615 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 4,72,986 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 24,24,904 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಇಂದು 7494 ಜನರಿಗೆ ಸೋಂಕು ತಗುಲಿದೆ. ಇವತ್ತು ಒಂದೇ ದಿನ 362 ಮಂದಿ ಸಾವನ್ನಪ್ಪಿದ್ದು, 2,55,842 ಸಕ್ರಿಯ ಪ್ರಕರಣಗಳು ಇವೆ. ಇಂದು 12407 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ಬಳ್ಳಾರಿಯಲ್ಲಿ 18, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 30, ಹಾಸನ 11, ಕಲಬುರ್ಗಿ 15, ಕೊಪ್ಪಳ 12, ಮಂಡ್ಯ 13, ಮೈಸೂರು 22, ಶಿವಮೊಗ್ಗ 13, ತುಮಕೂರು 13, ಉತ್ತರಕನ್ನಡ 17 ಮಂದಿ ಸೇರಿ ರಾಜ್ಯದಲ್ಲಿಂದು 626 ಸೋಂಕಿತರು ಸಾವನ್ನಪ್ಪಿದ್ದಾರೆ.