
ಬೆಂಗಳೂರು: ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಅಧಿಕವಾಗಿದೆ. ಹೊಸದಾಗಿ 31,531 ಜನರಿಗೆ ಸೋಂಕು ತಗಲಿದ್ದು, 403 ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ ಕೊರೋನಾ ಸೋಂಕಿನಿಂದ 21,837 ಜನರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ 6,00,147 ಸಕ್ರಿಯ ಪ್ರಕರಣಗಳು ಇವೆ. ಇವತ್ತು ಒಂದೇ ದಿನ 36,475 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 15,81,457 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 22,03,462 ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 143 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 8,344 ಜನರಿಗೆ ಹೊಸದಾಗಿ ಸೋಂಕು ತಗಲಿದ್ದು, 3,61,380 ಸಕ್ರಿಯ ಪ್ರಕರಣಗಳಿವೆ. ಇವತ್ತು ಒಂದೇ ದಿನ ಬೆಂಗಳೂರಿನಲ್ಲಿ 13,612 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬಳ್ಳಾರಿಯಲ್ಲಿ 26, ಬೆಂಗಳೂರು ಗ್ರಾಮಾಂತರ 17, ಹಾಸನ 18, ಹಾವೇರಿ 11, ಕಲಬುರ್ಗಿ 10, ಕೊಪ್ಪಳ 11, ಮಂಡ್ಯ 15, ಶಿವಮೊಗ್ಗ 14, ತುಮಕೂರು 11, ಉತ್ತರಕನ್ನಡ 24 ಜನ ಸೇರಿದಂತೆ ರಾಜ್ಯದಲ್ಲಿ ಇಂದು 403 ಮಂದಿ ಸಾವನ್ನಪ್ಪಿದ್ದಾರೆ.

