![](https://kannadadunia.com/wp-content/uploads/2021/12/Omicron-O-Virus-Green-COVID.jpg)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಏರುಗತಿಯಲ್ಲಿ ಸಾಗಿ ಸಾವಿರದ ಗಡಿದಾಟಿ ಹೊಸ ಪ್ರಕರಣ ಪತ್ತೆಯಾಗ್ತಿವೆ.
ಇದೇ ವೇಳೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆ ಆಗಿದೆ. ಇವತ್ತು ಹೊಸದಾಗಿ 10 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಕೂಡ ಏರಿಕೆ ಕಂಡಿದೆ.
ರಾಜಧಾನಿ ಬೆಂಗಳೂರಿನಲ್ಲಿ 8 ಕೇಸ್ ಗಳು ಪತ್ತೆಯಾಗಿದೆ. ಇವರಲ್ಲಿ 5 ಜನ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಧಾರವಾಡದಲ್ಲಿ 2 ಕೇಸ್ ಗಳು ಪತ್ತೆಯಾಗಿವೆ. ಜನವರಿ 2 ರಂದು ರಾಜ್ಯದಲ್ಲಿ 10 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 76ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.