ಬೆಂಗಳೂರು: ಮೊದಲ ಮತ್ತು ಎರಡನೇ ಅಲೆಗಿಂತ ಕೊರೋನಾ ಸೋಂಕು ಈಗ ರಾಜ್ಯದಲ್ಲಿ ತೀವ್ರವಾಗಿ ಏರಿಕೆ ಕಾಣುತ್ತಿದೆ.
ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ 300 ರಿಂದ 1000 ಗಡಿ ದಾಟಲು 8 ದಿನವಾಗಿತ್ತು. ಎರಡನೇ ಅಲೆಯಲ್ಲಿ 16 ದಿನ ಆಗಿತ್ತು. ಆದರೆ, ಮೂರನೇ ಅಲೆಯಲ್ಲಿ ಕೇವಲ ನಾಲ್ಕೇ ದಿನದಲ್ಲಿ ಸೋಂಕಿತರ ಸಂಖ್ಯೆ 300 ರಿಂದ 1000 ಕ್ಕೆ ಏರಿಕೆಯಾಗಿದೆ. ಸತತ 7ನೇ ದಿನವೂ ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ ಕಂಡಿದೆ. 132 ದಿನದ ನಂತರ ಪಾಸಿಟಿವಿಟಿ ದರ ಶೇಕಡ 1 ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಹೆಚ್ಚಾಗಿದೆ.
ಮೊದಲ ಅಲೆಗೆ ಕಾರಣವಾಗಿದ್ದ ಆಲ್ಪಾ, ಬೀಟಾ, ಎರಡನೇ ಅಲೆಗೆ ಕಾರಣವಾಗಿದ್ದರಿಂದ ಡೆಲ್ಟಾಗಿಂತ ಮೂರನೇ ಅಲೆಗೆ ಕಾರಣವಾದ ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ.