ಬೆಂಗಳೂರು: ಕೊರೋನಾದಿಂದ ಗುಣಮುಖರಾದವರಿಗೂ ಅನಾರೋಗ್ಯ ಉಂಟಾಗಲಿದೆ. ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ ಹಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.
ಕೊರೋನಾ ಸೋಂಕು ಸಾಮಾನ್ಯವಾಗಿ 7 ರಿಂದ 11 ದಿನಗಳ ನಂತರ ಹೊರ ಹೋಗುತ್ತದೆ. ಆದರೆ, ಅದರ ಪರಿಣಾಮ 4 ರಿಂದ 6 ವಾರಗಳ ಕಾಲ ಇರುತ್ತದೆ. ಈ ಪರಿಣಾಮದ ಕಾರಣ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶೇಕಡ 90 ರಷ್ಟು ಪ್ರಕರಣಗಳಲ್ಲಿ ಮನುಷ್ಯರ ರೋಗನಿರೋಧಕ ಶಕ್ತಿಯಿಂದ ವೈರಸ್ ತಾನಾಗಿಯೇ ಹೋಗುತ್ತದೆ. ರೋಗ ನಿರೋಧಕ ಶಕ್ತಿಯ ಆಧಾರದ ಮೇಲೆ ವೈರಸ್ ತೀವ್ರತೆ ಬಾಧಿಸುತ್ತದೆ ಎಂದು ಹೇಳಲಾಗಿದೆ.
ಒಮ್ಮೆ ಸೋಂಕು ಬಂದವರಿಗೆ ಮತ್ತೊಮ್ಮೆ ತಗಲುವ ಸಾಧ್ಯತೆ ಕಡಿಮೆ. ಸೋಂಕಿನ ವಿರುದ್ಧ ಪ್ರತಿಕಾಯ ಶಕ್ತಿ ವೃದ್ಧಿಯಾಗಿರುತ್ತದೆ. ಅಧ್ಯಯನಗಳಲ್ಲಿ ಕೂಡ ಇದು ಗೊತ್ತಾಗಿದೆ. ಆದರೆ, ಅನೇಕ ಪ್ರಕರಣಗಳಲ್ಲಿ ಗುಣಮುಖರಾದವರಿಗೂ ಸೋಂಕು ತಗುಲಿದೆ. ಕಿಡ್ನಿ, ಹೃದಯ, ಶ್ವಾಸಕೋಶ, ಮಧುಮೇಹ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ಶ್ವಾಸಕೋಶ ತಜ್ಞರು ಹೇಳಿದ್ದಾರೆ.