ಕೊರೊನಾ ವೈರಸ್ ಮತ್ತೊಮ್ಮೆ ಅಬ್ಬರಿಸಲು ಶುರುವಾಗಿದೆ. ರಷ್ಯಾದಲ್ಲಿ ಕೊರೊನಾ ಭಯ ಹುಟ್ಟಿಸಿದೆ. ರಷ್ಯಾದಲ್ಲಿ ಕೊರೊನಾಕ್ಕೆ ಬಲಿಯಾಗ್ತಿರುವವರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಕೊರೊನಾದ ಗಾಮಾ ರೂಪಾಂತರ, ರಷ್ಯಾದಲ್ಲಿ ವಿನಾಶಕ್ಕೆ ಕಾರಣವಾಗಿದೆ. ಈ ಮೊದಲು ಗಾಮಾ ರೂಪಾಂತರ, ಬ್ರೆಜಿಲ್‌ನಲ್ಲಿ ಕಂಡು ಬಂದಿತ್ತು.
ರಷ್ಯಾದಲ್ಲಿ, ಕೊರೊನಾ, ಒಂದೇ ದಿನದಲ್ಲಿ 808 ಜನರನ್ನು ಬಲಿ ಪಡೆದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ರಷ್ಯಾದಲ್ಲಿ ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ 6,534,791 ಕ್ಕೆ ತಲುಪಿದೆ. 5,828,972 ಜನರು ಕೊರೊನಾದಿಂದ ಗುಣಮುಖರಾಗಿದ್ದರೆ, ಒಟ್ಟು 168,049 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಕೊರೊನಾ ಸಾವಿನ ವಿಷಯದಲ್ಲಿ ರಷ್ಯಾ ವಿಶ್ವದ ಆರನೇ ಅತಿ ಹೆಚ್ಚು ಪೀಡಿತ ದೇಶವಾಗಿದೆ. ರಷ್ಯಾದ ಕೋವಿಡ್ -19 ಟಾಸ್ಕ್ ಫೋರ್ಸ್ ಗುರುವಾರ 21,932 ಹೊಸ ಕೋವಿಡ್ -19 ಪ್ರಕರಣಗಳನ್ನು ದೃಢಪಡಿಸಿದೆ. ಲಸಿಕೆ ಅಭಿಯಾನದಲ್ಲಿ ಆಗ್ತಿರುವ ವಿಳಂಬ, ಕೊರೊನಾ ಸೋಂಕು ಹೆಚ್ಚಾಗಲು ಕಾರಣ ಎನ್ನಲಾಗ್ತಿದೆ. ರಷ್ಯಾ ಜನಸಂಖ್ಯೆಯ ಕೇವಲ ಶೇಕಡಾ 19.7 ಜನರು ಮಾತ್ರ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.
ಮತ್ತೊಂದೆಡೆ, ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಕೊರೊನಾ ಅವಾಂತರ ಮುಂದುವರಿದಿದೆ. ಮೂರು ತಿಂಗಳ ನಂತರ, ಇದ್ದಕ್ಕಿದ್ದಂತೆ ಪಾಕಿಸ್ತಾನದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಇದು ಕೊರೊನಾದ ನಾಲ್ಕನೇ ಅಲೆಯಾಗಿದ್ದು, ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಇಲ್ಲಿ ಒಟ್ಟು 102 ಜನರು ಸಾವನ್ನಪ್ಪಿದ್ದಾರೆ.