ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಖರೀದಿ ಮಾಡದಿರಲು ನಿರ್ಧರಿಸಿದೆ. ಕೊರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತು ಜನ ಮೂರನೇ ಡೋಸ್ ಪಡೆದುಕೊಳ್ಳಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೊರೋನಾ ಲಸಿಕೆ ಖರೀದಿ ಮಾಡದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
2022- 23ನೇ ಸಾಲಿನಲ್ಲಿ ಲಸಿಕೆ ಖರೀದಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪಡೆದುಕೊಂಡಿದ್ದ 4237 ಕೋಟಿ ರೂಗಳನ್ನು ಹಣಕಾಸು ಸಚಿವಾಲಯಕ್ಕೆ ಮರಳಿಸಲು ನಿರ್ಧರಿಸಿದೆ. ಬಜೆಟ್ ನಲ್ಲಿ ಸರ್ಕಾರ 5000 ಕೋಟಿ ರೂ. ನೀಡಿದ್ದು, ಇನ್ನೂ 4,237 ಕೋಟಿ ಖರ್ಚಾಗದೆ ಉಳಿದಿದೆ.
ಕೇಂದ್ರ ಹಾಗೂ ರಾಜ್ಯಗಳ ಬಳಿ 1.8 ಕೋಟಿ ಡೋಸ್ ಲಸಿಕೆಗಳು ಉಳಿದಿದ್ದು, ಇನ್ನೂ ಆರು ತಿಂಗಳ ಈ ಲಸಿಕೆ ಬಳಸಬಹುದಾಗಿದೆ. ಕೊರೋನಾ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಖರೀದಿ ನಿಲ್ಲಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.