![](https://kannadadunia.com/wp-content/uploads/2022/01/corona-omicron.png)
ನವದೆಹಲಿ: ಈಗಾಗಲೇ ಹಲವು ಮಹಾನಗರಗಳಲ್ಲಿ ಕೊರೋನಾ ಸೋಂಕು ಇಳಿಮುಖ ಆಗಿದ್ದು, ಫೆಬ್ರವರಿ 15 ರ ಬಳಿಕ ಸೋಂಕು ಕಡಿಮೆಯಾಗಲಿದೆ.
ಒಮಿಕ್ರಾನ್ ಬಳಿಕ ದೇಶದಲ್ಲಿ ಕಾಣಿಸಿಕೊಂಡ ಮೂರನೆಯ ಅಲೆ ಫೆಬ್ರವರಿ 15ರ ಬಳಿಕ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಹಿಂದೆ ಅನೇಕ ತಜ್ಞರು ಇದರ ಬಗ್ಗೆ ಸುಳಿವು ನೀಡಿದ್ದರಾದರೂ ಸರ್ಕಾರ ಇದೇ ಮೊದಲಬಾರಿಗೆ ಸೋಂಕು ಇಳಿಕೆಯಾಗುವುದನ್ನು ಖಚಿತಪಡಿಸಿದೆ.
ಬಹುತೇಕ ರಾಜ್ಯಗಳಲ್ಲಿ ಪ್ರಕರಣಗಳು ಕಡಿಮೆಯಾಗಿವೆ. ಮಹಾನಗರಗಳಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಲಸಿಕೆ ನಂತರ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಕೊರೋನಾ ನಿರೋಧಕ ಲಸಿಕೆಗಳು ಮೂರನೆಯ ಅಲೆ ಪರಿಣಾಮವನ್ನು ಕಡಿಮೆ ಮಾಡಿವೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ. ಶೀಘ್ರದಲ್ಲಿಯೇ ಕೊರೋನಾ ಪ್ಯಾಂಡೆಮಿಕ್ ನಿಂದ ಎಂಡೆಮಿಕ್ ಆಗಿ ಪರಿವರ್ತನೆಯಾಗಲಿದೆ ಎಂದು ಹೇಳಲಾಗಿದೆ.